Posts

Showing posts from August, 2022

ಸ್ವಾಮಿ ವಿವೇಕಾನಂದ ಸಂಕ್ಷಿಪ್ತ ಜೀವನ

         ಸ್ವಾಮಿ ವಿವೇಕಾನಂದ  ಕ್ರಿ . ಶ . ೧೮೯೩ ನೆಯ ಸೆಪ್ಟೆಂಬರ್ ಹನ್ನೊಂದನೆಯ ದಿನ . ಅಮೆರಿಕಾ ದೇಶದ ಚಿಕಾಗೂ ನಗರದಲ್ಲಿ ದೊಡ್ಡ ಸಭೆ ನೆರದಿದ . ಎಲ್ಲಾ ಧರ್ಮದವರನ್ನೂ ಒಟ್ಟುಗೂಡಿಸಿ ಒಬ್ಬರು ಇನ್ನೊಬ್ಬರ ಅಭಿಪ್ರಾಯವನ್ನು ತಿಳಿದು ಜಾತಿ ದ್ವೇಷಗಳನ್ನು ಕಡಿಮೆ ಮಾಡ ಬೇಕೆಂಬುದ ಆ ಸಮ್ಮೇಳನದ ಗುರಿ , ಜಗತ್ತಿನ ನಾನಾ ಭಾಗ ಗಳಿಂದ ಆಯಾ ಧರ್ಮಕ್ಕೆ ಸೇರಿದ ಹಲವು ವಿದ್ವಾಂಸರು ಅಲ್ಲಿ ನೆರದಿರುವರು . ಬೆಳಗಿನಿಂದ ಒಬ್ಬೊಬ್ಬರಾಗಿ ಬಂದು ವೇದಿಕೆಯ ಮೇಲೆ ನಿಂತು , ತಮ್ಮ ತಮ್ಮ ಮತಗಳನ್ನು ಪ್ರತಿಪಾದಿಸಿದರು . ಅಂದಿನ ಸಂಜೆ ಆ ದಿನದ ಕೊನೆಯ ಭಾಷಣ ಬಂದಿತು . ಕಾವಿಯ ನಿಲುವಂಗಿ ತೊಟ್ಟು ಅದೇ ಬಣ್ಣದ ಪೇಟವನ್ನು ಸುತ್ತಿ ಕೊಂಡಿದ್ದ ಸುಂದರವಾದ ಗಂಭೀರವಾದ ಮನುಷ್ಯನೊಬ್ಬನು ಮಾತನಾಡಲು ಎದ್ದು ನಿಂತನು . ಪ್ರೇಕ್ಷಕರನ್ನು : ಅಮೆರಿಕಾದ ಸಹೋದರ ಸಹೋದರಿಯರ " ಎಂದು ಸಂಬೋಧಿಸಿದನು . ನೆರೆದಿದ್ದವರಲ್ಲ ಚಪ್ಪಾಳೆ ತಟ್ಟಿದರು ! ದೊಡ್ಡ ಸಿಡಿಲಿನ ಗದ್ದಲ ಎದ್ದಿತು ಸಮ್ಮೇಳನದಲ್ಲಿ , ಆ ತೇಜಸ್ವಿ ಪುರುಷನು ಹಿಂದೂ ಧರ್ಮದ ಪರವಾಗಿ ಅಲ್ಲಿ ನೆರದವರನ್ನು ವಂದಿಸಿದನು . ಅವನ ಭಾಷಣದ ಶೈಲಿ ಮತ್ತು ಭಾವಗಳು ಎಲ್ಲರನ್ನೂ ಆಕರ್ಷಿಸಿತು . ಆ ವ್ಯಕ್ತಿಯ ಸ್ವಾಮಿ ವಿವೇಕಾನಂದರು ! ಎಲ್ಲರ ಬಾಯಿಯಲ್ಲಿಯೂ ಅನಂತರ ಅವರದೇ ಮಾತು , ಎಲ್ಲಾ ಪತ್ರಿಕೆಗಳಲ್ಲಿಯೂ ಅವರ ಭಾವಚಿತ್ರವ ! ಕೋಟ್ಯಾಧೀಶರು ಅವರನ್ನು ತಮ್ಮ ಮನೆಗೆ ಕರೆಯುವುದಕ್ಕೆ ನಾನು ತಾನೆಂದು ಮುಂದೆ ಬಂದರು . ಅಮೆರ