ಸ್ವಾಮಿ ವಿವೇಕಾನಂದ ಸಂಕ್ಷಿಪ್ತ ಜೀವನ

        ಸ್ವಾಮಿ ವಿವೇಕಾನಂದ

 ಕ್ರಿ . ಶ . ೧೮೯೩ ನೆಯ ಸೆಪ್ಟೆಂಬರ್ ಹನ್ನೊಂದನೆಯ ದಿನ . ಅಮೆರಿಕಾ ದೇಶದ ಚಿಕಾಗೂ ನಗರದಲ್ಲಿ ದೊಡ್ಡ ಸಭೆ ನೆರದಿದ . ಎಲ್ಲಾ ಧರ್ಮದವರನ್ನೂ ಒಟ್ಟುಗೂಡಿಸಿ ಒಬ್ಬರು ಇನ್ನೊಬ್ಬರ ಅಭಿಪ್ರಾಯವನ್ನು ತಿಳಿದು ಜಾತಿ ದ್ವೇಷಗಳನ್ನು ಕಡಿಮೆ ಮಾಡ ಬೇಕೆಂಬುದ ಆ ಸಮ್ಮೇಳನದ ಗುರಿ , ಜಗತ್ತಿನ ನಾನಾ ಭಾಗ ಗಳಿಂದ ಆಯಾ ಧರ್ಮಕ್ಕೆ ಸೇರಿದ ಹಲವು ವಿದ್ವಾಂಸರು ಅಲ್ಲಿ ನೆರದಿರುವರು . ಬೆಳಗಿನಿಂದ ಒಬ್ಬೊಬ್ಬರಾಗಿ ಬಂದು ವೇದಿಕೆಯ ಮೇಲೆ ನಿಂತು , ತಮ್ಮ ತಮ್ಮ ಮತಗಳನ್ನು ಪ್ರತಿಪಾದಿಸಿದರು . ಅಂದಿನ ಸಂಜೆ ಆ ದಿನದ ಕೊನೆಯ ಭಾಷಣ ಬಂದಿತು . ಕಾವಿಯ ನಿಲುವಂಗಿ ತೊಟ್ಟು ಅದೇ ಬಣ್ಣದ ಪೇಟವನ್ನು ಸುತ್ತಿ ಕೊಂಡಿದ್ದ ಸುಂದರವಾದ ಗಂಭೀರವಾದ ಮನುಷ್ಯನೊಬ್ಬನು ಮಾತನಾಡಲು ಎದ್ದು ನಿಂತನು . ಪ್ರೇಕ್ಷಕರನ್ನು : ಅಮೆರಿಕಾದ ಸಹೋದರ ಸಹೋದರಿಯರ " ಎಂದು ಸಂಬೋಧಿಸಿದನು . ನೆರೆದಿದ್ದವರಲ್ಲ ಚಪ್ಪಾಳೆ ತಟ್ಟಿದರು ! ದೊಡ್ಡ ಸಿಡಿಲಿನ ಗದ್ದಲ ಎದ್ದಿತು ಸಮ್ಮೇಳನದಲ್ಲಿ , ಆ ತೇಜಸ್ವಿ ಪುರುಷನು ಹಿಂದೂ ಧರ್ಮದ ಪರವಾಗಿ ಅಲ್ಲಿ ನೆರದವರನ್ನು ವಂದಿಸಿದನು . ಅವನ ಭಾಷಣದ ಶೈಲಿ ಮತ್ತು ಭಾವಗಳು ಎಲ್ಲರನ್ನೂ ಆಕರ್ಷಿಸಿತು . ಆ ವ್ಯಕ್ತಿಯ ಸ್ವಾಮಿ ವಿವೇಕಾನಂದರು ! ಎಲ್ಲರ ಬಾಯಿಯಲ್ಲಿಯೂ ಅನಂತರ ಅವರದೇ ಮಾತು , ಎಲ್ಲಾ ಪತ್ರಿಕೆಗಳಲ್ಲಿಯೂ ಅವರ ಭಾವಚಿತ್ರವ ! ಕೋಟ್ಯಾಧೀಶರು ಅವರನ್ನು ತಮ್ಮ ಮನೆಗೆ ಕರೆಯುವುದಕ್ಕೆ ನಾನು ತಾನೆಂದು ಮುಂದೆ ಬಂದರು . ಅಮೆರಿಕಾ ದೇಶದಲ್ಲಿ ಭಾರತೀಯನೊಬ್ಬನು ನಿಂತು ಇಷ್ಟು ಸುಂದರವಾಗಿ ಮಾತನಾಡಿ ಎಲ್ಲರ ಮನಸ್ಸನ್ನೂ ಸೆಳೆದುದು ಇದೇ ಮೊದಲು , ಸ್ವಾಮಿ ವಿವೇಕಾನಂದರು ಸನಾತನ ಹಿಂದೂಧರ್ಮದ ತತ್ತ್ವಗಳನ್ನು ಪಾಶ್ಚಾತ್ಯರಿಗೆ ಬೋಧಿಸಿದರು . ನಮ್ಮ ಧರ್ಮ ನಾಗರಿಕತೆ , ಸಂಸ್ಕೃತಿ ಮತ್ತೆ ಯಾವ ದೇಶಕ್ಕೂ ಕೀಳಲ್ಲವೆಂದು ಸಾರಿದರು . ಅಲ್ಲಿಯ ಜನರು ಭರತಖಂಡವೆಂದರೆ ಅದೊಂದು ಕಾಡುಜನರು ಇರುವ ದೇಶವೆಂದು ತಿಳಿದಿದ್ದರು . ಅವರ ಅಲಕ್ಷ್ಯದ ಕಸದ ಬುಟ್ಟಿಯಲ್ಲಿತ್ತು ನಮ್ಮ ದೇಶ , ಈ ಕಳಂಕ ವನ್ನು ಸ್ವಾಮಿ ವಿವೇಕಾನಂದರು ಹೋಗಲಾಡಿಸಿದರು ! ಎಲ್ಲಾ ದೇಶಗಳ ಎದುರಿಗೆ ನಮ್ಮ ದೇಶ ಗೌರವದಿಂದ ತಲೆಎತ್ತಿ ನಿಲ್ಲು ವಂತೆ ಮಾಡಿದರು . ಇಂತಹ ಪುತ್ರನನ್ನು ಹೆತ್ತ ತಂದೆತಾಯಿಗಳು ಧನ್ಯರು , ಮಾನ್ಯರು , ಇಡೀ ದೇಶವೇ ಅವರಿಗೆ ಚಿರಋಣಿ . ನೂರಾರು ವರ್ಷಗಳಿಂದ ನಮ್ಮ ದೇಶ ಗುಲಾಮಗಿರಿಯಲ್ಲಿ ನರಳುತ್ತಿತ್ತು . ಈ ದೇಶದ ಐಶ್ವರ್ಯವಲ್ಲ ಪರರ ಪಾಲಾಗಿತ್ತು ಮಾನ ಮುಚ್ಚಿಕೊಳ್ಳುವುದಕ್ಕೂ ಚಿಂದಿ ಬಟ್ಟೆ ಇಲ್ಲದೆ ಇರು ವವರು ಎಷ್ಟೋ ಮಂದಿ ಹುಟ್ಟಿ ಸಾಯುವ ತನಕ ಒಂದು ದಿನವೂ ಸುಖಭೋಜನವಿಲ್ಲದೆ ಇರುವವರು ಎಷ್ಟೋ ಮಂದಿ . ಇಂತಹ ಕಾರ್ಪಣ್ಯ ಸ್ಥಿತಿಗೆ ಬಂದಿತ್ತು ನಮ್ಮ ದೇಶ . ಆದರೂ ಭರತಖಂಡ ವಿವೇಕಾನಂದರಂತಹ ಪುತ್ರರತ್ನಕ್ಕೆ ಜನ್ಮವಿತ್ತಿತ್ತು . ಇದನ್ನು ನೋಡಿದರೆ ನಮ್ಮ ದೇಶ ಇದೇ ಸ್ಥಿತಿಯಲ್ಲಿ ಇರುವು ದಿಲ್ಲ ; ರೋಮ್ , ಈಜಿಪ್ಟ್ , ಬ್ಯಾಬಿಲೋನ್ ಮುಂತಾದ ಹಿಂದಿನ ನಾಗರೀಕತೆಗಳು ಮಣ್ಣುಪಾಲಾದಂತೆ ಆಗುವುದಿಲ್ಲ ಎಂದು ಹೇಳಬಹುದು . ಚಳಿಗಾಲದಲ್ಲಿ ಎಲೆಗಳನ್ನೆಲ್ಲ ಕಳೆದು ಕೊಂಡ ಮರ ನೋಡಲು ಒಣಗಿದಂತೆ ಕಾಣುವುದು . ಆದರೆ ಮರದ ಒಳಗೆ ಜೀವ ಇದೆ . ಹೊಸ ತಳಿರು ಮುಂದೆ ಬಿಡುವುದು , ಹೂವು ಅರಳುವುದು , ಕಾಯಾಗುವುದು . ಅಲ್ಲಿಗೆ ಹಾರುವ ಹಕ್ಕಿ ಗಳ ತಂಡ ಬರುವುದು . ನಾಲ್ಕು ದಿಕ್ಕೂ ಅವುಗಳ ಕಲಕಲನಾದ ದಿಂದ ತುಂಬುವುದು . ಹಾಗೆಯೆ ನಮ್ಮ ನಾಡು ಈಗ ನಿದ್ರಿಸು ತ್ತಿದೆ ಅಷ್ಟೆ : ಸತ್ತಿಲ್ಲ . ಕ್ರಮೇಣ ಜಾಗೃತವಾಗುತ್ತಿದೆ . ಪ್ರಗತಿಯ ಶಿಖರವನ್ನು ಮುಟ್ಟಿ ಹಿಂದುಳಿದವರನ್ನು ಆ ಕಡೆಗೆ ಕರೆ ದೊಯ್ಯುವ ಮಹಾಶಕ್ತಿ ಅದರಲ್ಲಿ ಹುದುಗಿದೆ . ಶ್ರೀರಾಮ ಕೃಷ್ಣರು , ಸ್ವಾಮಿ ವಿವೇಕಾನಂದರು , ಮಹಾತ್ಮ ಗಾಂಧೀಜಿ ಯವರು , ಅರವಿಂದರು ಇವರುಗಳೆ ಅದಕ್ಕೆ ಸಾಕ್ಷಿ . 99 ಸ್ವಾಮಿ ವಿವೇಕಾನಂದರು ಹೊಸತಾಗಿ ಏನನ್ನೂ ಬೋಧಿಸ ಲಿಲ್ಲ . ಹೊಸ ತತ್ತ್ವವನ್ನು ಜಾರಿಗೆ ತರಲಿಲ್ಲ . ಹೊಸ ಧರ್ಮ ವನ್ನು ಸ್ಥಾಪನೆ ಮಾಡಲಿಲ್ಲ . ನಮ್ಮ ಹಿಂದಿನ ಗೀತೆ ಉಪನಿಷತ್ತು ಗಳ ಸಂದೇಶಕ್ಕೆ ಅನುಗುಣವಾಗಿ ತಮ್ಮ ಜೀವನವನ್ನು ರೂಪಿಸಿ ಕೊಂಡರು . ಅದನ್ನ ತಮ್ಮ ಸಿಂಹವಾಣಿಯಲ್ಲಿ ಜಗತ್ತಿಗೆ ಬೋಧಿ ಸಿದರು . ಜೀವನವನ್ನು ಇವರು ಹಳಿಯಲಿಲ್ಲ . ಜೀವನದಲ್ಲಿ ಒಂದು ಉತ್ಸಾಹವನ್ನು ತುಂಬುವುದು ಇವರ ಸಂದೇಶ , ನಿರಾಶೆ ಯಿಲ್ಲ . ಇವರ ಬೋಧನೆಯಲ್ಲಿ , ಎಂತಹ ನಿರಾಶೆಯ ಕತ್ತಲ ಲ್ಲಿಯೂ ಆಶಯ ಹಣತೆಯನ್ನು ಹಚ್ಚುವುದು ಇವರ ವಾಣಿ . ಎಲ್ಲಾ ನಮ್ಮ ಹಿಂದಿನ ಕರ್ಮ ಎಂದು ಕಣ್ಣುಮುಚ್ಚಿ ಕೈಕಟ್ಟಿ ಕುಳಿತವರ ಗುಂಪಿಗೆ ಇವರು ಸೇರಿಲ್ಲ . ಇಂದು ಭರತಖಂಡ ಅಧೋಗತಿಗೆ ಇಳಿದಿದ್ದರೆ , ಅದಕ್ಕೆ ನಾವು ಕಾರಣ . ಭರತಖಂಡ ವೆನ್ನುವುದು ಒಂದು ದೊಡ್ಡ ದೇವಾಲಯ , ನೂರಾರು ವರುಷ ಗಳಿಂದ ಮೇಲೆ ಮೇಲೆ ಬಿದ್ದ ಕಸವನ್ನು ಎಲ್ಲರೂ ಗುಡಿಸಿ ಸಾರಿಸಿ ಅದು ಹಿಂದಿನ ಭವ್ಯತೆಯನ್ನು ಮರಳಿ ಪಡೆಯುವಂತೆ ಮಾಡ ಬೇಕು . ಕಲ್ಲಿನ ವಿಗ್ರಹದಲ್ಲಿ ಮಾತ್ರ ದೇವರನ್ನು ಕಾಣುವುದಲ್ಲ ; ಎಲ್ಲರ ಹೃದಯದಲ್ಲಿಯೂ ಅವನನ್ನು ನೋಡಬೇಕು . ಪುಣ್ಯ ವಂತರಲ್ಲಿ ಮಾತ್ರವಲ್ಲ ; ಪಾಪಿಗಳಲ್ಲಿ ಅವನನ್ನು ಹೆಚ್ಚಾಗಿ ನೋಡಬೇಕು . ಘನಪಂಡಿತರಲ್ಲಿ ಮಾತ್ರವಲ್ಲ ; ಕಡು ಮೂರ್ಖ ರಲ್ಲಿಯೂ ಅವನನ್ನು ನೋಡಬೇಕು . ಹಿಂದಿನ ಧರ್ಮ , ಅತಿಥಿ ದೇವೋ ಭವ , ಮಾತೃದೇವೋ ಭವ , ಪಿತೃದೇವೋ ಭವ ' ಎಂದು ಮಾತ್ರ ಸಾರಿತು . ಜೊತೆಗೆ ಸ್ವಾಮಿ ವಿವೇಕಾನಂದರು “ ದೀನದೇವೋ ಭವ , ದರಿದ್ರದೇವೋ ಭವ , ಪಾಪಿದೇವೋ ಭವ ” ಎಂದು ಸಾರಿದರು . ಇವರ ಜೀವನ ಒಂದು ಸುಂಟರಗಾಳಿಯಂತೆ , ಹಲವು ಅದ್ಭುತ ಘಟನೆಗಳಿಂದ ಕೂಡಿ ಪ್ರಚಂಡ ವೇಗದಲ್ಲಿ ಚಲಿಸು ಇದೆ . ಜಗದ ಹವ್ಯಾಸವನ್ನೆ ಬಿಟ್ಟ ಸಂನ್ಯಾಸಿಗಳ ಗುಂಪಿಗೆ ಸೇರಿ ದವರಲ್ಲ ಇವರು . ಕಠೋರ ಸಂನ್ಯಾಸಿಗಳೇನೊ ನಿಜ ಇವರು . ಅದರ ಜೊತೆಗೆ ವೀರ ದೇಶಭಕ್ತರೂ ಕಲೋಪಾಸಕರೂ ದೊಡ್ಡ ಕರ್ಮಯೋಗಿಗಳೂ ಭಕ್ತಶ್ರೇಷ್ಠರೂ ಧ್ಯಾನಸಿದ್ಧರೂ ಆಗಿದ್ದರು . ಅವರ ಜೀವನದ ಸಂಕ್ಷೇಪ ಪರಿಚಯಕ್ಕೆ ಇನ್ನು ಹೊರಡೋಣ . 

ಬಾಲ್ಯ 
ಕಲ್ಕತ್ತೆಯಲ್ಲಿ ವಿಶ್ವನಾಥದತ್ತ ಮತ್ತು ಭುವನೇಶ್ವರೀದೇವಿ ಎಂಬ ಕ್ಷಾತ್ರವಂಶಕ್ಕೆ ಸೇರಿದ ದಂಪತಿಗಳು ವಾಸವಾಗಿದ್ದರು . ವಿಶ್ವನಾಥದತ್ತನು ವಕೀಲಿ ಕೆಲಸ ಮಾಡುತ್ತಿದ್ದನು . ಆ ಕೆಲಸ ದಿಂದ ಅವನಿಗೆ ಸಾಕಾಗುವಷ್ಟು ವರಮಾನ ಸಿಕ್ಕುತ್ತಿತ್ತು . ಅವ ನದು ಧಾರಾಳ ಸ್ವಭಾವ . ಬಡವರನ್ನು ನೋಡಿದಾಗ ಮರುಗುವ ಹೃದಯ ; ಯಾರು ಬಂದು ಸಹಾಯ ಕೇಳಿದರೂ ಇಲ್ಲವೆಂದು ಹೇಳುವ ಸ್ವಭಾವದವನಲ್ಲ , ಆತ ದೊಡ್ಡ ಮೇಧಾವಿ , ವಿಶಾಲ ವಾದ ಪ್ರಪಂಚದ ಅನುಭವವಿತ್ತು ಅವನಿಗೆ , ಲಲಿತಕಲೆ , ಸಾಹಿತ್ಯ ಮುಂತಾದವುಗಳಲ್ಲಿಯೂ ಅಭಿರುಚಿ . ಅವನ ಪತ್ನಿ ಭುವನೇಶ್ವರಿದೇವಿ , ಅವನಿಗೆ ಅನುರೂಪಳಾದ ವಳು . ಆಕೆಯ ನಡೆನುಡಿಯಲ್ಲಿ ರಾಣಿಯ ಗಾಂಭೀರ್ಯವಿತ್ತು . ಪೂಜೆ , ವ್ರತ , ಮುಂತಾದುವನ್ನು ಮಾಡುವುದೆಂದರೆ ಅವಳಿಗೆ ತುಂಬ ಆಸೆ , ರಾಮಾಯಣ ಮತ್ತು ಮಹಾಭಾರತ ಅವಳು ಪ್ರತಿ ` ದಿನವೂ ಓದುತ್ತಿದ್ದ ಗ್ರಂಥಗಳು , ಪುರಾಣದಲ್ಲಿ ಬರುವ ತ್ಯಾಗಿ ಗಳ ತಪಸ್ವಿಗಳ ವೀರಪುಂಗವರ ಆದರ್ಶ ಅವಳಲ್ಲಿ ರಕ್ತಗತವಾಗಿತ್ತು . 
    ಅವರಿಗೆ ಎರಡು ಹೆಣ್ಣು ಮಕ್ಕಳು ಆಗಿದ್ದುವು . ಒಂದು ಗಂಡು ಮಗುವಿಗಾಗಿ ಅವರು ತವಕಪಡುತ್ತಿದ್ದರು . ಕಾಶಿಯ ವಿಶ್ವೇಶ್ವರ ನಿಗೆ ಭುವನೇಶ್ವರಿದೇವಿ ಹರಕೆ ಹೊತ್ತಳು . ಪೂಜೆಯಲ್ಲೂ ಧ್ಯಾನ ದಲ್ಲೂ ಕಾಲವನ್ನು ಕಳೆದಳು . ಒಂದು ಗಂಡು ಮಗುವನ್ನು ಕರುಣಿಸೆಂದು ದೇವರನ್ನು ಪ್ರಾರ್ಥಿಸಿದಳು . ಒಂದು ದಿನ ಅವಳಿ ಗೊಂದು ಕನಸು ಬಿತ್ತು : ಪ್ರಕಾಶಮಾನವಾದ ಶಿವನನ್ನು ಅಲ್ಲಿ ನೋಡಿದಳು . ಕ್ರಮೇಣ ಅವನು ಒಂದು ಸಣ್ಣ ಮಗುವಿನ ರೂಪ ವನ್ನು ತಾಳಿ ಇವಳ ತೊಡೆಯ ಮೇಲೆ ಬಂದು ಕುಳಿತು ಆಡ ತೊಡಗಿದನು . ಇನ್ನು ಇವಳ ಆನಂದಕ್ಕೆ ಪಾರವೇ ಇಲ್ಲ . ಆದರೆ ಕನಸು ಜಾರಿತು . ಇದಾದ ಕೆಲವು ತಿಂಗಳ ಮೇಲೆ ಅವಳಿಗೆ ಒಂದು ಗಂಡು ಮಗು ಹುಟ್ಟಿತು ; ಆ ಶುಭದಿನವೇ ಕ್ರಿ . ಶ . ೧೮೬೩ ಜನವರಿ ೧೨ ನೆಯ ತಾರೀಖು , ಮೊದಲು ಮಗುವಿಗೆ ವೀರೇಶ್ವರ ಎಂದು ನಾಮಕರಣ ಮಾಡಿದರು . ಅನ್ನಪ್ರಾಶನದ ಸಮಯದಲ್ಲಿ ನರೇಂದ್ರನಾಥನೆಂದು ಕರೆದರು . ತಂದೆ ತಾಯಿ ಗಳು ಮುದ್ದಿಗೆ ಕೂಗುತ್ತಿದ್ದುದು “ ಬಿಲೆ ” ಎಂದು . ನರೇಂದ್ರನು ತುಂಬಾ ತುಂಟ ಹುಡುಗ , ಗದರಿಸಿದರೆ ಸುಮ್ಮ ನಾಗುವ ಸ್ವಭಾವವೇ ಅಲ್ಲ ಅವನದು . ಅವನನ್ನು ಸುಮ್ಮನಿರಿ ಸಲು ಆಸೆ ಅಂಜಿಕೆ ಇವುಗಳೆಲ್ಲ ವ್ಯರ್ಥವಾಗುತ್ತಿತ್ತು . ತಾಯಿಗೆ ಉಪಾಯ ತೋರದೆ ತಲೆಯ ಮೇಲೆ ತಣ್ಣೀರನ್ನು ಚೆಲ್ಲಿ ಶಿವಶಿವ ಎನ್ನುವಳು . ಆಗ ನರೇಂದ್ರನು ಸುಮ್ಮನಾಗುತ್ತಿದ್ದನು . ಕೆಲವು ವೇಳೆ ತಾಯಿಗೆ ಸಹನೆ ಮೀರಿ “ ನಾನು ದೇವರನ್ನು ಒಂದು ಮಗು ವನ್ನು ಕರುಣಿಸೆಂದು ಬೇಡಿದರೆ ತನ್ನ ಭೂತಗಣದಿಂದ ಯಾವುದೊ ಒಂದನ್ನು ಇಲ್ಲಿಗೆ ಕಳುಹಿಸಿರುವನು ” ಎನ್ನುತ್ತಿದ್ದಳು . “ ಬಿಲೆ ! ನೀನು ಹಾಗೆಲ್ಲ ತಂಟೆ ಮಾಡಿದರೆ ಶಿವನು ನಿನ್ನನ್ನು ಕೈಲಾಸಕ್ಕೆ ಸೇರಿಸುವುದಿಲ್ಲ ” ಎನ್ನುವಳು . ಆಗ ನರೇಂದ್ರ ಸುಮ್ಮನಾಗಿ ತಾಯಿ ಹೇಳಿದಂತೆ ಕೇಳುತ್ತಿದ್ದನು . ಆದರೂ ಇವನನ್ನು ಸುಧಾರಿಸುವುದಕ್ಕೆ , ತಾಯಿ ಇಬ್ಬರು ದಾದಿಯರನ್ನು ಗೊತ್ತು ಮಾಡಬೇಕಾಯಿತು .     

ಬಾಲ್ಯದಿಂದಲೇ ಮಗುವಿಗೆ ಸಾಧುಸಂತರನ್ನು ಕಂಡರೆ ಬಹು ಪ್ರೀತಿ , ಒಂದು ದಿನ ಬೈರಾಗಿಯೊಬ್ಬನು ಬಂದು ಮಗುವನ್ನು ಭಿಕ್ಷೆ ಬೇಡಿದನು . ನರೇಂದ್ರನ ಹತ್ತಿರ ಕೊಡುವುದಕ್ಕೆ ಏನೂ ಇರಲಿಲ್ಲ . ಹೊಸದಾದ ಒಂದು ಪಂಚೆಯನ್ನು ಉಟ್ಟಿದ್ದನು ; ಅದನ್ನೇ ಆ ಬೈರಾಗಿಗೆ ಕೊಟ್ಟನು . ಬೈರಾಗಿ ಅದನ್ನು ಸಂತೋಷ ದಿಂದ ತಲೆಗೆ ಸುತ್ತಿ ಮಗುವನ್ನು ಹರಸಿ ಹೊರಟುಹೋದ . ಅಂದಿನಿಂದ ಯಾರಾದರೂ ಭಿಕ್ಷುಕರು ಬಂದರೆ ನರೇಂದ್ರನನ್ನು ಒಂದು ಕೋಣೆಯಲ್ಲಿ ಕೂಡಿಹಾಕುತ್ತಿದ್ದರು . ಅಲ್ಲಾದರೂ ಸುಮ್ಮನಿರುತ್ತಿದ್ದನೆ ? ಕೋಣೆಯಲ್ಲಿ ಏನಿದ್ದರೆ ಅದನ್ನು ಕಿಟಕಿ ಯಿಂದ ಭಿಕ್ಷುಕರಿಗೆ ಎಸೆಯುತ್ತಿದ್ದನು .
     
    ತನ್ನ ಅಕ್ಕಂದಿರನ್ನು ಕಾಡುವುದೆಂದರೆ ನರೇಂದ್ರನಿಗೆ ತುಂಬ ಇಷ್ಟ . ಅವರು ಅಟ್ಟಿಸಿಕೊಂಡು ಬಂದರೆ ನರೇಂದ್ರನು ಒಂದು ಚರಂಡಿಯಲ್ಲಿ ನಿಂತು ಅಣಕಿಸುವನು . ಅವರು ಇವನ ಹತ್ತಿರ ಬರುವುದು ಹೇಗೆ ? ಮೈಲಿಗೆ ಆಗುತ್ತದೆ ಎಂಬ ಭಯ . ಬೈಯುತ್ತ ಹಿಂತಿರುಗುತ್ತಿದ್ದರು . 

     ನರೇಂದ್ರನಿಗೆ ಪ್ರಾಣಿಗಳನ್ನು ಕಂಡರೆ ತುಂಬ ಇಷ್ಟ . ಮನೆಯ ಹಸು , ಅದರ ಪುಟ್ಟ ಕರು ಇವನ ಆಟದ ಗೆಳೆಯರು , ಜೊತೆಗೆ ಕೋತಿ , ಕುರಿಮರಿ , ನವಿಲು ಮುಂತಾದವು ಬೇರೆ ಇದ್ದುವು . ಗಾಡಿ ಹೊಡೆಯುವುದೆಂದರೆ ಇವನಿಗೆ ತುಂಬಾ ಇಷ್ಟ , ದೊಡ್ಡ ` ರುಮಾಲು ಸುತ್ತಿ ಕೈಯಲ್ಲಿ ಚಾವಟಿ ಹಿಡಿದುಕೊಂಡು ಎಲ್ಲರಿ ಮಗುವಿನ ದೃಷ್ಟಿಗೆ ದೊಡ್ಡ ಮನುಷ್ಯ . ಒಂದು ಕಾಲದಲ್ಲಿ ತಾನೂ ಗಿಂತ ಮೇಲೆ ಕುಳಿತುಕೊಳ್ಳುವನು . ಗಾಡಿ ಹೊಡೆಯುವವನು ಗಾಡಿ ಹೊಡೆಯುವವನಾಗಬೇಕೆಂದು ಬಯಸಿದ್ದನು .

       ನರೇಂದ್ರನಿಗೆ ವಿದ್ಯಾಭ್ಯಾಸ ಆರಂಭವಾದುದು ತನ್ನ ತಾಯಿಯ ತೊಡೆಯ ಮೇಲೆ , ಅಕ್ಷರಗಳನ್ನು ಮೊದಲು ತಾಯಿ ಯಿಂದ ಕಲಿತನು . ಆಕೆ ಮಗುವನ್ನು ತೊಡೆಯ ಮೇಲೆ ಕುಳ್ಳಿರಿಸಿ ಕೊಂಡು ರಾಮಾಯಣ ಮಹಾಭಾರತಗಳಿಂದ ಕಥೆಯನ್ನು ಹೇಳು ತಿದ್ದಳು . ಕೆಲವು ವೇಳೆ ಅದು ಅರ್ಜುನನ ಪೌರುಷವಾಗಿರ ಬಹುದು ; ಕರ್ಣನ ತ್ಯಾಗವಾಗಿರಬಹುದು ; ಪ್ರಹ್ಲಾದನ ಭಕ್ತಿ ಯಾಗಿರಬಹುದು ; ಸೀತೆಯ ಪಾತಿವ್ರತ್ಯವಾಗಿರಬಹುದು . ಎಳೆಯ ವಯಸ್ಸಿನಲ್ಲಿ ಕೇಳಿದ ಇಂತಹ ಕಥೆಗಳು ಬಂಡೆಯ ಮೇಲೆ ಕೊರೆದ ಅಕ್ಷರದಂತೆ ಅಚ್ಚಳಿಯದೆ ನಿಂತವು . ತಾನೂ ಮುಂದೆ ಅವರಂತೆ ಆಗಬೇಕೆಂದು ಬಯಸಿದನು .  
     
      ರಾಗವಾಗಿ ರಾಮಾಯಣವನ್ನು ಓದುವುದೆಂದರೆ ನರೇಂದ್ರನಿಗೆ ತುಂಬಾ ಪ್ರೀತಿ . ಹನುಮಂತ ಎಲ್ಲಿರುವನು ಎಂದು ಒಂದು ಬಾರಿ ಪುರಾಣದ ಆಚಾರ್ಯರನ್ನು ಕೇಳಿದನು . ಅವರು ತಮಾಷ ಗಾಗಿ ರಾತ್ರಿ ಬಾಳೆಯ ತೋಟದಲ್ಲಿ ಕಾದರೆ ಅವನು ಹಣ್ಣು ತಿನ್ನಲು ಅಲ್ಲಿಗೆ ಬರುತ್ತಾನೆ ” ಎಂದರು . ನರೇಂದ್ರ ಅದನ್ನು ನಂಬಿ ಆ ದಿನ ರಾತ್ರಿ ಬಹಳ ಹೊತ್ತಿನವರೆಗೆ ತೋಟದಲ್ಲಿ ಕಾದು ಹನುಮಂತನನ್ನು ಕಾಣದೆ ಹಿಂತಿರುಗಿದನು . ತಾಯಿಯನ್ನು ಬೆಳಿಗ್ಗೆ ಕೇಳಿದಾಗ ಅವಳು ಮತ್ತಷ್ಟು ತಮಾಷೆ ಮಾಡುವುದಕ್ಕಾಗಿ “ ಹನುಮಂತ ಯಾರೂ ಭಕ್ತರ ಮನೆಗೆ ಹೋಗಿದ್ದನೇನೋ , ಇನ್ನೊಂದು ದಿನ ಕಾದರೆ ಬರಬಹುದು ” ಎಂದಳು . ನರೇಂದ್ರನು ಮಾರನೆ ದಿನವೂ ಕಾದು , ನಿರಾಸೆಯಿಂದ ಮನೆಗೆ ಹಿಂತಿರುಗಿದನು.
      ಸೀತಾರಾಮರ ಮೇಲೆ ನರೇಂದ್ರನಿಗೆ ತುಂಬಾ ಭಕ್ತಿ , ಒಂದು ದಿನ ಪೇಟೆಯಿಂದ ಮಣ್ಣಿನ ಒಂದು ಸೀತಾರಾಮರ ವಿಗ್ರಹವನ್ನು ತಂದನು . ಭಕ್ತಿಯಿಂದ ಅದನ್ನು ಪೂಜಿಸಿದನು . ಒಬ್ಬ ಹುಡುಗ ನೊಂದಿಗೆ ಮಹಡಿಯ ಮೇಲೆ ಒಂದು ಕೋಣೆಗೆ ಹೋಗಿಬಾಗಿಲು ಹಾಕಿಕೊಂಡು ಕುಳಿತನು . ಮನೆಯವರಿಗೆ ನರೇಂದ್ರ ಮನೆಯಲ್ಲಿ ಕಾಣಲಿಲ್ಲ . ಮನೆಯಲ್ಲೆಲ್ಲಾ ಹುಡುಕಿದರು . ಕೊನೆಗೆ ಇವನಿದ್ದ ಕೊಠಡಿಗೆ ಬಂದು ಬಾಗಿಲನ್ನು ತೆರೆದರು . ಆದರೆ ನರೇಂದ್ರನಾದರೋ ದೀರ್ಘ ಧ್ಯಾನದಲ್ಲಿ ಮುಳುಗಿದ್ದನು . ಒಂದು ದಿನ ಇವನ ಕೋಚ್ ಮ್ಯಾನ್ ಸ್ನೇಹಿತ ಗೃಹಸ್ಥ ಜೀವನ ವನ್ನು ತುಂಬ ಹಳಿದ . ಇದು ನರೇಂದ್ರನ ಮನಸ್ಸಿಗೆ ತಾಕಿತು . ಮದುವ ಕೆಟ್ಟದ್ದಾದರೆ ರಾಮನೇಕೆ ಮದುವೆಯಾಗಬೇಕು ಎಂದು ಸೀತಾರಾಮರ ವಿಗ್ರಹವನ್ನು ಆಚೆಗೆ ಎಸೆದನು . ಅಂದಿನಿಂದ ಪೂಜಿಸುವುದಕ್ಕೆ ಯೋಗಿರಾಜನಾದ ಶಿವನನ್ನು ತಂದನು . ಪ್ರತಿದಿನವೂ ರಾತ್ರಿ ಮಲಗಿಕೊಳ್ಳುವಾಗ ನರೇಂದ್ರನ ಹುಬ್ಬಿನ ನಡುವೆ ಬೆಳಕು ಕಾಣುತ್ತಿತ್ತು . ಕ್ರಮೇಣ ಅದು ದೊಡ್ಡ ದಾಗಿ ದೇಹವನ್ನೆಲ್ಲ ವ್ಯಾಪಿಸುತ್ತಿತ್ತು . ಇದು ಎಲ್ಲರಿಗೂ ಆಗುವ ಒಂದು ಬಗೆಯ ಅನುಭವವೆಂದು ಮೊದಲು ನರೇಂದ್ರನು ತಿಳಿದಿ ದ್ದನು . ಒಂದು ದಿನ ತನ್ನ ಸ್ನೇಹಿತನನ್ನು “ ನೀನು ಮಲಗಿಕೊಳ್ಳು ವಾಗ ಒಂದು ಬೆಳಕನ್ನು ನೋಡುವೆಯ ? ' ಎಂದು ಪ್ರಶ್ನಿಸಿದನು . ಅವನು ಇಲ್ಲವೆಂದನು . ಈ ಅನುಭವ ಆಧ್ಯಾತ್ಮಿಕ ಸಾಧನೆಯಲ್ಲಿ ನರೇಂದ್ರನು ತುಂಬ ನುರಿತವನು ಎಂಬುದನ್ನು ತೋರುತ್ತಿತ್ತು . ಆದ ಕಾರಣವೆ ಮುಂದೆ ಇವನು ಶ್ರೀರಾಮಕೃಷ್ಣರನ್ನು ನೋಡಿ ದಾಗ , “ ನೀನು ಮಲಗಿಕೊಳ್ಳುವಾಗ ಬೆಳಕನ್ನು ನೋಡುತ್ತೀಯ ? ” ಎಂದು ಅವರು ಕೇಳಿದರು . ಸಾಧಾರಣವಾಗಿ ಮಕ್ಕಳು ಹಲವು ಆಟಗಳನ್ನು ಆಡುವುವು . ಆದರೆ ನರೇಂದ್ರನು ಈ ಆಟಗಳ ಜೊತೆಗೆ ದೇವರ ಧ್ಯಾನವನ್ನೂ ಒಂದು ಆಟದಂತೆ ಆಡುತ್ತಿದ್ದನು . ಒಂದು ದಿನ ಕೆಲವು ಹುಡು ಗರು ಒಟ್ಟಿಗೆ ಸೇರಿ ಒಂದು ಹಳೆಯ ಕೋಣೆಯಲ್ಲಿ ದೇವರ ಧ್ಯಾನ ಮಾಡಲು ಕುಳಿತರು . ಸ್ವಲ್ಪ ಹೊತ್ತಿನಲ್ಲಿ ಒಂದು ನಾಗರ ಹಾವು ಹೆಡೆ ಎತ್ತಿಕೊಂಡು ಅಲ್ಲಿಗೆ ಬಂದಿತು . ಉಳಿದ ಹುಡುಗ

Comments

Popular posts from this blog

Sneha yoni / Snehaashaya, Panchakarma

Dagdha Vrana (burns), Shalya tantra

Swedana karma