Posts

Showing posts with the label yoga

ಭುಜಂಗಾಸನ ಮಾಡುವ ವಿಧಾನ ಮತ್ತು ಪ್ರಯೋಜನಗಳು

ಅಭ್ಯಾಸರಕ್ರಮ- ಕಾಲುಗಳನ್ನು ನೀಳವಾಗಿ ಚಾಚಿ ನೆಲದಲ್ಲಿ ಬೋರಲಾಗಿ ಮಲಗಬೇಕು. ಅಂಗೈಗಳನ್ನು ನೆಲದ ಮೇಲೆ ಊರಿ ಉಸಿರನ್ನು ತೆಗೆದುಕೊಂಡು ಕೈಗಳ ಆಧಾರದ ಮೇಲೆ ತಲೆಯನ್ನು ಸಾವಕಾಶವಾಗಿ ಮೇಲೆತ್ತಬೇಕು. ಅನಂತರ ಪುನಃ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ದೇಹವನ್ನು ಹೊಕ್ಕುಳದ ಭಾಗದ ವರೆಗೆ ಮೇಲಕ್ಕೆತ್ತಿ ಆಕಾಶವನ್ನು ನೋಡುತ್ತಿರಬೇಕು. ಈಗ ಎರಡು ಬಾರಿ ಶ್ವಾಸೋಚ್ವ್ಪಾಸ  ಮಾಡಬೇಕು. ಹತ್ತು ಸೆಕೆಂಡುಗಳ ನಂತರ ಉಚ್ಚ್ವಾಸದೊಂದಿಗೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು. ಈ ಆಸನವನ್ನು ಎರಡು ಸೆಕೆಂಡುಗಳಿಂದ ಹಿಡಿದು ಎರಡರಿಂದ ಮೂರು ನಿಮಿಷಗಳವರೆಗೆ ಐದರಿಂದ ಹತ್ತು ಬಾರಿ ಪುನರಾವರ್ತಿಸಿ ಮಾಡಬೇಕು. ‌ ಪ್ರಯೋಜನ- ಬೆನ್ನೆಲುಬಿನ ಸ್ಥಿತಿಸ್ಥಾಪಕದಿಂದ ಚಿರಯೌವನ ಉಂಟಾಗುವುದು. ಬೆನ್ನುಮೂಳೆಯ ಮತ್ತು ಸ್ನಾಯುಗಳ ದೋಷ ಪರಿಹಾರವಾಗುವುದು‌. ಬೆನ್ನು ನೋವು ನಿವಾರಣೆಯಾಗುವುದು. ಬೊಜ್ಜು ಕರಗುವುದು ಮಲಬದ್ಧತೆ ನಿವಾರಣೆಯಾಗುವುದು. ಜಠರ ಎದೆ ಸೊಂಟ ಮತ್ತು ತೊಡೆಗಳು ಬಲಿಷ್ಠವಾಗುವುವು. ಮಹಿಳೆಯರಲ್ಲಿ ಬೀಳುಪು ಮತ್ತು ಉರಿ ಮೂತ್ರ ರೋಗ ಹಾಗೂ ಮಾಸಿಕ ಧರ್ಮದ ತೊಂದರೆಗಳು ಮತ್ತು ಗರ್ಭಾಶಯದ ದೋಷಗಳು ಪರಿಹಾರವಾಗುವುವು.

ಯೋಗಾಸನ ಅಭ್ಯಾಸಿಗಳು ಗಮನಿಸಬೇಕಾದ ಅಂಶಗಳು

Image
ಸಾಧಕನು ಮೂಗಿನ ಮೂಲಕವೇ ಉಸಿರಾಡಬೇಕು. ಪ್ರಥಮ ಸಂಧ್ಯಾಕಾಲದಲ್ಲಿ ಮಾತ್ರ ಯೋಗಾಸನವನ್ನು ಬರಿ ಹೊಟ್ಟೆಯಲ್ಲಿರುವಾಗ ಅಭ್ಯಾಸ ಮಾಡುವುದು ಉತ್ತಮ. ಬೇಕೆಂದಿದ್ದರೆ ಒಂದು ಲೋಟ ಹಾಲು ಅಥವಾ ಚಹಾ ಅಥವಾ ಕಾಫಿ ಅನ್ನು ಸೇವಿಸಿ ಇಪ್ಪತ್ತು ನಿಮಿಷಗಳ ನಂತರ ಅಭ್ಯಾಸವನ್ನು ಮಾಡಬಹುದು. ಊಟವಾದ ಬಳಿಕ 4 ಗಂಟೆ ಬಿಟ್ಟು ಅಭ್ಯಾಸ ಮಾಡಬೇಕು ಅಭ್ಯಾಸವಾದ ನಂತರ ಅರ್ಧದಿಂದ ಒಂದು ತಾಸು ಬಿಟ್ಟು ಆಹಾರವನ್ನು ಸೇವಿಸಬಹುದು. ಆಸನವನ್ನು ಪದೇಪದೇ ದಿನೇದಿನೇ ವರ್ಷವರ್ಷವೂ ಮಾಡುತ್ತಿರಬೇಕು ಇದು ಶ್ರವಣ ಅಥವಾ ಜಪ ಕರ್ಮಮಾರ್ಗ. ಯೋಗಾಸನಗಳನ್ನು ತಪ್ಪಿಸದೆ ಎಡೆಬಿಡದೆ ನಿಷ್ಠರಾಗಿ ನಿರಂತರವಾಗಿ ಮತ್ತು ನಿಯಮಬದ್ಧವಾಗಿ ಮುಂದುವರಿಸಿ ಕೊಳ್ಳಬೇಕು ನಡುವಿನಲ್ಲಿ ತಪ್ಪಿಸಿದ್ದರೆ ಅವುಗಳ ಪ್ರಯೋಜನ ಗುಣಗಳು ಕಡಿಮೆಯಾಗುತ್ತವೆ. ಕೆಲವು ಯೋಗಾಸನಗಳ ಅಭ್ಯಾಸದ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಬಹುದು ಆದರೆ ಎಡೆಬಿಡದೆ ಹಟದಿಂದ ಅಭ್ಯಾಸವನ್ನು ಮುಂದುವರಿಸಿದರೆ ಕ್ರಮೇಣ ಸುಲಭವಾಗುವುದು. ಅಭ್ಯಾಸದಲ್ಲಿ ತೊಡಗುವ ಮುನ್ನ ಮೇಲೆ ಹಾಗೂ ಮೂತ್ರಕೋಶ ಗಳನ್ನು ಬರೆದು ಮಾಡಬೇಕು. ಮಹಿಳೆಯರು ಯೋಗಾಸನಗಳನ್ನು ಆಚರಿಸಬಹುದು ಆದರೆ ತಮ್ಮ ಋತುಕಾಲದಲ್ಲಿ, 5 ತಿಂಗಳ ನಂತರದ ಗರ್ಭಿಣೀ ಅವಸ್ಥೆಯಲ್ಲಿಯು, ಪ್ರಸೂತಿಯಾದ ಎರಡರಿಂದ ಮೂರು ತಿಂಗಳ ಗಳವರೆಗೂ ಯೋಗಾಸನವನ್ನು ಆಚರಿಸಬಾರದು.

ಯೋಗ ಒಂದು ಜೀವನ ದರ್ಶನ

ಯೋಗ ಒಂದು ಜೀವನ ದರ್ಶನ ಯೋಗವು ಒಂದು ಜೀವನ ದರ್ಶನವಿದೆ. ಯೋಗ ಆತ್ಮಾನುಶಾಸನ ವಾಗಿದೆ. ಯೋಗ ಒಂದು ಜೀವನ ಪದ್ಧತಿಯಾಗಿದೆ. ಯೋಗ ವ್ಯಾಧಿಮುಕ್ತ ಮತ್ತು ಸಮಾಧಿಯುಕ್ತ ಜೀವನದ ಸಂಕಲ್ಪನೆಯಾಗಿದೆ. ಯೋಗ ಆತ್ಮ ಉಪಚಾರ ಮತ್ತು ಆತ್ಮ ದರ್ಶನದ ಶ್ರೇಷ್ಠ ಆಧ್ಯಾತ್ಮಿಕ ವಿದ್ಯೆಯಾಗಿದೆ. ಯೋಗ ವ್ಯಕ್ತಿತ್ವವನ್ನು ವಾಮನನನಿಂದ ವಿರಾಟ ಮಾಡುವ ಈ ಸಮಗ್ರ ರೂಪದಿಂದ ತನ್ನನ್ನು ರೂಪಾಂತರ ವಿಕಸಿತ ಮಾಡಿಕೊಳ್ಳುವ ಆಧ್ಯಾತ್ಮಿಕ ವಿದ್ಯೆಯಾಗಿದೆ. ಯೋಗ ಕೇವಲ ವೈಕಲ್ಪಿಕ ಚಿಕಿತ್ಸೆ ಪದ್ಧತಿ ಮಾತ್ರವಲ್ಲ ಅನಿಸಿತು ಯೋಗದ ಪ್ರಯೋಗ ಪರಿಣಾಮಗಳ ಮೇಲೆ ಆಧಾರಿತವಾಗಿರುವ ಒಂದು ಎಂಥ ಪ್ರಮಾಣವೆಂದರೆ ಅದು ವ್ಯಾಧಿಯನ್ನು ನಿರ್ಮೂಲನೆ ಮಾಡುತ್ತದೆ. ಅಂತಃಕರಣಕ್ಕೆ ಇದು ಒಂದು ಸಂಪೂರ್ಣ ವಿಧದ ಶರೀರ ರೋಗ ಮಾರ್ಗವಲ್ಲದೆ ಬದಲಿಗೆ ಮಾನಸಿಕ ರೋಗದ ಚಿಕಿತ್ಸೆಯು ಶಾಸ್ತ್ರವಾಗಿದೆ. ಯೋಗ ಅಲೋಪತಿ ತರಹದ ಯಾವ ಲಕ್ಷಷಣಿಕ ಚಿಕಿತ್ಸೆ ಅಲ್ಲ ಅಂದರೆ ರೋಗಗಳ ಮೂಲ ಕಾರಣವನ್ನು ನಿರ್ಮೂಲನೆ ಮಾಡಿ ನಮಗೆ ಒಳಗಿನಿಂದ ಆರೋಗ್ಯ ಪ್ರದಾನ ಮಾಡುತ್ತದೆ. ಯೋಗವನ್ನುು ಮಾತ್ರ ಒಂದು ವ್ಯಾಯಾಮದ ನೋಡು ಅಥವಾ ವರ್ಗ ವಿಶೇಷ ಪೂಜೆ ನೋಡುವುದು ಸಂಕೀರ್ಣತಪೂರ್ಣ ಅವಿವೇಕ ದೃಷ್ಟಿಕೋನ ವಾಗಿದೆ. ಸ್ವಾಸ್ಥ, ಆಗ್ರಹ, ಅಜ್ಞಾನ ಅಥವಾ ಅಹಂಕಾರದಿಂದ ಮೇಲೆ ಬಂದು ಯೋಗವನ್ನು ಒಂದುು ಸಂಕೀರ್ಣ ಜ್ಞಾನದ ರೀತಿಯಲ್ಲಿ ನೋಡಬೇಕಾಗಿದೆ. ಯೋಗಕ್ಕೆ ಪೌರಾಣಿಕ ಮಾನ್ಯತೆ ಇದೆ. ಅಷ್ಟಟ ಚಕ್ರಗಳು ಜಾಗೃತಗೊಳ್ಳುತ್ತವೆ ಅಥವಾ ಪ್ರಾಣಯಾಮ...