ಭುಜಂಗಾಸನ ಮಾಡುವ ವಿಧಾನ ಮತ್ತು ಪ್ರಯೋಜನಗಳು


ಅಭ್ಯಾಸರಕ್ರಮ-

ಕಾಲುಗಳನ್ನು ನೀಳವಾಗಿ ಚಾಚಿ ನೆಲದಲ್ಲಿ ಬೋರಲಾಗಿ ಮಲಗಬೇಕು.

ಅಂಗೈಗಳನ್ನು ನೆಲದ ಮೇಲೆ ಊರಿ ಉಸಿರನ್ನು ತೆಗೆದುಕೊಂಡು ಕೈಗಳ ಆಧಾರದ ಮೇಲೆ ತಲೆಯನ್ನು ಸಾವಕಾಶವಾಗಿ ಮೇಲೆತ್ತಬೇಕು.

ಅನಂತರ ಪುನಃ ದೀರ್ಘವಾಗಿ ಉಸಿರನ್ನು ಎಳೆದುಕೊಂಡು ದೇಹವನ್ನು ಹೊಕ್ಕುಳದ ಭಾಗದ ವರೆಗೆ ಮೇಲಕ್ಕೆತ್ತಿ ಆಕಾಶವನ್ನು ನೋಡುತ್ತಿರಬೇಕು.

ಈಗ ಎರಡು ಬಾರಿ ಶ್ವಾಸೋಚ್ವ್ಪಾಸ  ಮಾಡಬೇಕು.

ಹತ್ತು ಸೆಕೆಂಡುಗಳ ನಂತರ ಉಚ್ಚ್ವಾಸದೊಂದಿಗೆ ನಿಧಾನವಾಗಿ ಮೊದಲಿನ ಸ್ಥಿತಿಗೆ ಬರಬೇಕು.

ಈ ಆಸನವನ್ನು ಎರಡು ಸೆಕೆಂಡುಗಳಿಂದ ಹಿಡಿದು ಎರಡರಿಂದ ಮೂರು ನಿಮಿಷಗಳವರೆಗೆ ಐದರಿಂದ ಹತ್ತು ಬಾರಿ ಪುನರಾವರ್ತಿಸಿ ಮಾಡಬೇಕು. ‌

ಪ್ರಯೋಜನ-

ಬೆನ್ನೆಲುಬಿನ ಸ್ಥಿತಿಸ್ಥಾಪಕದಿಂದ ಚಿರಯೌವನ ಉಂಟಾಗುವುದು.

ಬೆನ್ನುಮೂಳೆಯ ಮತ್ತು ಸ್ನಾಯುಗಳ ದೋಷ ಪರಿಹಾರವಾಗುವುದು‌.

ಬೆನ್ನು ನೋವು ನಿವಾರಣೆಯಾಗುವುದು.

ಬೊಜ್ಜು ಕರಗುವುದು ಮಲಬದ್ಧತೆ ನಿವಾರಣೆಯಾಗುವುದು.

ಜಠರ ಎದೆ ಸೊಂಟ ಮತ್ತು ತೊಡೆಗಳು ಬಲಿಷ್ಠವಾಗುವುವು.

ಮಹಿಳೆಯರಲ್ಲಿ ಬೀಳುಪು ಮತ್ತು ಉರಿ ಮೂತ್ರ ರೋಗ ಹಾಗೂ ಮಾಸಿಕ ಧರ್ಮದ ತೊಂದರೆಗಳು ಮತ್ತು ಗರ್ಭಾಶಯದ ದೋಷಗಳು ಪರಿಹಾರವಾಗುವುವು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra