Posts

Showing posts from May, 2018

ಶೀತಲೀ ಪ್ರಾಣಾಯಾಮದ ಪ್ರಯೋಜನಗಳು ಹಾಗೂ ಮಾಡುವ ವಿಧಾನ

Image
ಧ್ಯಾನಕ್ಕೆ ಉಪಯುಕ್ತವಾದ ಆಸನದಲ್ಲಿ ಕುಳಿತು ಕೈಯನ್ನು ಮೊಣಕಾಲಿನ ಮೇಲೆಡಿ. ನಾಲಿಗೆಯನ್ನು ನಾಳದ ಕಡೆ ತಿರುಗಿಸಿ ಬಾಯನ್ನು ತೆರೆದಿಟ್ಟು ಬಾಯಿಂದ ಪೂರಕವಾಗುವಂತೆ ಮಾಡಿ. ನಾಲಿಗೆಯಿಂದ ನಿಧಾನವಾಗಿ ಉಸಿರು ತೆಗೆದುಕೊಂಡು ಶ್ವಾಸಕೋಶಕ್ಕೆ ಪೂರ್ಣ ಭರ್ತಿ ಮಾಡಿ. ಕೆಲವು ಕ್ಷಣ ತಡೆದು ಬಾಯಿಯನ್ನು ಮುಚ್ಚಿ ಎರಡು ನಾಸಿಕ ದಿಂದ ವಿರೇಚನಗೊಳಿಸಿ. ನಂತರ ನಾಲಿಗೆಯನ್ನು ತಿರುಗಿಸಿ ಬಾಯಿಂದ ಪೂರಕ ಹಾಗೂ ಮೂಗಿನಿಂದ ವಿರೇಚನಗೊಳಿಸಿ. ಈ ರೀತಿ ಐದರಿಂದ ಹತ್ತು ಬಾರಿ ಅವಶ್ಯಕತೆಗನುಗುಣವಾಗಿ ಮಾಡಬಹುದು. ಶೀತಕಾಲದಲ್ಲಿ ಇದರ ಅಭ್ಯಾಸ ಕಡಿಮೆಗೊಳಿಸಿ. ವಿಶೇಷತೆ- ಕುಂಭ ಕದ ಜೊತೆಗೆ ಜಾಲಂಧರಬಂಧ ವನ್ನು ಸಹ ಮಾಡಬಹುದು ಹಾಗೂ ಟಾನ್ಸಿಲ ರೋಗಿಗಳು ಶೀತಲ ಹಾಗೂ ಶೀತಕಾರಿ ಪ್ರಾಣಾಯಾಮ ಮಾಡಬಾರದು. ಲಾಭಗಳು- ನಾಲಿಗೆ ಬಾಯಿ ಹಾಗೂ ಗಂಟಲಿನ ರೋಗಗಳಿಗೆ ಲಾಭದಾಯಕವಾಗಿದೆ. ಗುಲ್ , ಜ್ವರ, ಅಜೀರ್ಣತೆ ಮುಂತಾದವುಗಳಿಗೆ ಅನುಕೂಲವಾಗಿದೆ. ಇದರ ಸಿದ್ಧಿಯಿಂದ ಹಸಿವು ದಣಿವು ಮಾಯವಾಗುವುದು. ಈ ರೀತಿ ಯೋಗ ಗ್ರಂಥದಲ್ಲಿ ಹೇಳಲಾಗಿದೆ. ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದು ಪಿತ್ತ ರೋಗಗಳಿಗೆ ಲಾಭದಾಯಕವಾಗುವುದು ಹಾಗೂ ರಕ್ತವನ್ನು ಶುದ್ಧೀಕರಿಸುವುದು.

ಮಧುಮೇಹ ಅಥವಾ ಸಿಹಿಮೂತ್ರ ರೋಗದ ಲಕ್ಷಣಗಳು ಹಾಗೂ ಮನೆ ಮದ್ದು

Image
ಮಧುಮೇಹ ಅಥವಾ ಸಿಹಿಮೂತ್ರ ರೋಗದ ಲಕ್ಷಣಗಳು- ಸಿಹಿ ಮೂತ್ರ ರೋಗಿಗಳ ರಕ್ತದಲ್ಲಿನ ಮತ್ತು ಮೂತ್ರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ರೋಗಿಗೆ ಪದೇ-ಪದೇ ಮೂತ್ರ ವಿಸರ್ಜನೆಯಾಗುತ್ತದೆ ಮತ್ತು ಮೂತ್ರದ ಪ್ರಮಾಣವೂ ಹೆಚ್ಚುವುದು. ಮೂತ್ರದ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವುದು. ರೋಗಿಗೆ ಹಸಿವು ಬಾಯಾರಿಕೆ ಹೆಚ್ಚುವುದು. ಎಷ್ಟು ಆಹಾರ ಸೇವಿಸಿದರೂ ಬಲಹೀನತೆ, ಆಯಾಸ, ತೂಕಡಿಕೆ, ನವೆ ಮತ್ತು ಕುರುಗಳು ಉಂಟಾಗುವವು. ಈ ವ್ಯಾಧಿಗೆ ಸಂಪೂರ್ಣ ಪರಿಹಾರ ಇಲ್ಲವಾದರೂ ಯೋಗ್ಯವಾದ ಚಿಕಿತ್ಸೆಗಳ ಮೂಲಕ ಅದನ್ನು ಸಮಗ್ರವಾಗಿ ಹತೋಟಿಯಲ್ಲಿ ಇಡಬಹುದು. ಮಧುಮೇಹ ರೋಗಿಗಳು ಸಿಹಿ ಪದಾರ್ಥಗಳನ್ನು ಸೇವಿಸದಿರುವುದು ಕ್ಷೇಮ ಅನ್ನ, ಶರ್ಕರ, ಪಿಷ್ಟಗಳನ್ನು ಆದಷ್ಟು ಕಡಿಮೆ ಮಾಡಬೇಕು. ಬ್ರೆಡ್, ಆಲೂಗಡ್ಡೆ, ಕೇಕ್, ಬಿಸ್ಕತ್ತು, ಬಾಳೆಹಣ್ಣು , ಕಾಫಿ, ಚಹಾ, ಹೊಗೆಸೊಪ್ಪು, ಮಧ್ಯ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನಿತ್ಯ ಆಹಾರದಲ್ಲಿ ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಸಿಹಿಮೂತ್ರ ರೋಗ ಮತ್ತು ಅಧಿಕ ರಕ್ತದ ಒತ್ತಡ ಉಂಟಾಗುವ ಸಂಭವವಿರುತ್ತದೆ. ಆದುದರಿಂದ ಮಾನವನು ಉಪ್ಪನ್ನು ಆದಷ್ಟು ಕಡಿಮೆ ಯಾಗಿ ಸೇವಿಸುವುದು ಉತ್ತಮ. ಮಧುಮೇಹ ಸಿಹಿಮೂತ್ರ ರೋಗವನ್ನು ಸಂಪೂರ್ಣ ಹತೋಟಿಯಲ್ಲಿಡುವ ಕೆಲವು ಚಿಕಿತ್ಸೆಗಳನ್ನು ಈ ಕೆಳಗೆ ವಿವರಿಸಲಾಗಿದೆ:- ಕೆಲವು ಬೇವಿನ ಎಲೆಗಳನ್ನು ಎರಡರಿಂದ ಮೂರು ದಿನ ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಓಮದ (ಅಜವ

ತುಪ್ಪವನ್ನು ಸಂರಕ್ಷಸುವ ವಿಧಾನವನ್ನು ತಿಳಿದುಕೊಳ್ಳಿ

Image
ತುಪ್ಪ- ತುಪ್ಪವು ಗಬ್ಬುನಾರುವ ದುರ್ವಾಸನೆಯುಳ್ಳದ್ದಾಗದಂತೆ ರಕ್ಷಿಸಿಕೊಳ್ಳಬೇಕಾದರೆ ಅದನ್ನು ಒಂದಿಷ್ಟಾದರೂ ಬೆಳಕು ಮತ್ತು ಗಾಳಿ ತೂರದ ಪಾತ್ರೆಯೊಳಗೆ ಹಾಕಿ ಶೀತೋಪಕರಣದೋಳಗೆ  ಅಥವಾ ತಂಪಾದ ಬೆಳಕಿಲ್ಲದ ಮತ್ತು ತೇವವಿಲ್ಲದ ಜಾಗದಲ್ಲಿ ಇಟ್ಟುಕೊಳ್ಳಬೇಕು. ತುಪ್ಪದಲ್ಲಿ ಕಮಟು ನಾಥದ ದುರ್ವಾಸನೆ ಇದ್ದರೆ ಅದಕ್ಕೆ ಕೆಲವಷ್ಟು ನುಗ್ಗೆಕಾಯಿಯ ಎಲೆಗಳನ್ನು ಸೇರಿಸಿ ಅದನ್ನು ನಿಧಾನವಾಗಿ ಬೆಂಕಿಯ ಮೇಲೆ ಕುದಿಯುವ ತನಕ ಅನುಕ್ರಮವಾಗಿ ಕಾಯಿಸಿ ಕೆಳಗಿಳಿಸಿ ಸ್ವಲ್ಪ ಹೊತ್ತಾದ ಬಳಿಕ ತೆಳ್ಳಗಿರುವ ಬಟ್ಟೆಯಲ್ಲಿ ಗಳಿಸಿದರೆ ಗಬ್ಬು ವಾಸನೆಯನ್ನು ಹೋಗಲಾಡಿಸಬಹುದು. ಬೆಣ್ಣೆಯನ್ನು ಕರಗಿಸಿ ತುಪ್ಪ ತಯಾರಿಸುವಾಗ ಅದಕ್ಕೆ ಒಂದು ಚುಟು ಎಲಕ್ಕಿ ಯ ಹುಡುಗಿ ಇಲ್ಲವೇ ಒಂದು ವೀಳ್ಯದೆಲೆ ಸೇರಿಸಿದರೆ ತುಪ್ಪದಲ್ಲಿ ರಮ್ಯವಾದ ಸುವಾಸನೆ ಉಂಟಾಗುವುದು.

ನೆಗಡಿಗೆ ಮನೆ ಮದ್ದು ಔಷಧಿ ತಿಳಿದುಕೊಳ್ಳಿ

Image
ನೆಗಡಿ-   ಬಿಸಿಯಾರು ಟೀ ಗೆ ನಿಂಬೆಹಣ್ಣಿನ ರಸ ಹಿಂಡಿ ಸೇವಿಸುವುದರಿಂದ ನೆಗಡಿ ಗುಣವಾಗುವುದು. ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಗುಣವಾಗುತ್ತದೆ. ಆಗಾಗ್ಗೆ ನೆಗಡಿಯನ್ನು ಅನುಭವಿಸುವವರು ಅನಾನಸು(fineapple) ಹಣ್ಣನ್ನು ತಿಂದರೆ ಒಳ್ಳೆಯದು. ಓಮ ಮತ್ತು ಅರಸಿನಪುಡಿಯ ಸಮಾಂಶ ತೆಗೆದುಕೊಂಡು ಕೆಂಡದ ಮೇಲೆ ಸಿಂಪಡಿಸಿ ಬರುವ ಹೊಗೆಯನ್ನು ಮೂಗಿನೊಳಗೆ ತಿಳಿದುಕೊಳ್ಳುವುದರಿಂದ ನೆಗಡಿಯು ಎಷ್ಟು ಕಷ್ಟ ಕೊಡುತ್ತಿದ್ದರೂ ಕೂಡ ಗುಣವಾಗುತ್ತದೆ. ಐವತ್ತು ಗ್ರಾಂ ಹುರಳಿ 10 ಗ್ರಾಂ ನೆಲ್ಲಿಚಟ್ಟು 3 ಗ್ರಾಂ ಹಿಪ್ಪಲಿ ಇವುಗಳನ್ನು ಕುಟ್ಟಿ ಅಷ್ಟಾಂಶ ಕಷಾಯ ಮಾಡಿ ಶೋಧಿಸಿ ಕುಡಿದರೆ ವಿಶೇಷವಾಗಿ ನೀರು ಸುರಿಯುತ್ತಿರುವ ನೆಗಡಿ ಗುಣವಾಗುತ್ತದೆ. ಮೂಗಿನಹೊರಭಾಗದಲ್ಲ ಬುಡದಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಚ್ಚಿದರೆ ನೆಗಡಿ ಗುಣವಾಗುತ್ತದೆ. ಹುರಿದು ಬಿಸಿ ಮಾಡಿದ ಮರಳಿನಿಂದ ಅಥವಾ ಅಡುಗೆ ಮನೆಯೊಳಗೆ ದೂರು ಮತ್ತಿತ್ತರ ಹೊಲಸನ್ನು ಒರೆಸುವ ಬಟ್ಟೆಯನ್ನು ಬೆಂಕಿಯ ಕೆಂಡದಿಂದ ಕಾಯಿಸಿ ಆ ವಸ್ತ್ರದಿಂದ ಹಣೆ ಎದೆ ಇತ್ಯಾದಿಗಳಿಗೆ ಶಾಖ ಕೊಟ್ಟು ದಪ್ಪ ಕಂಬಳಿಯಿಂದ ಹೊದಿಸಿ ಮಲಗಿಸಿದರೆ ನೆಗಡಿ ಗುಣವಾಗುವುದು. ಕಿತ್ತಳೆ ಹಣ್ಣಿನ ರಸ ಯಥೇಪ್ಟವಾಗಿ  ಸೇವಿಸುವುದರಿಂದಲೂ ಲೆಟ್ಯೂಸ್ ಟೊಮೆಟೊ ಕ್ಯಾರೆಟ್ ಎಲೆಕೋಸು ಕೊತ್ತಂಬರಿ ಸೊಪ್ಪು ಇವುಗಳನ್ನು ಕೋಸಂಬರಿ ತಯಾರಿಸಿ ಸೇವಿಸುವುದರಿಂದಲೂ ನೆಗಡಿ ವಾಸಿ

ಹಾಲನ್ನು ಸಂರಕ್ಷಿಸುವ ವಿಧಾನವನ್ನು ತಿಳಿದುಕೊಳ್ಳಿ

ಹಾಲು- ಹಾಲುಕಾಯಿಸುವಾಗ ಅಜಾಗೃತಿಯಿಂದ ಉರಿದು ಹೋಗಿ ಅದರಲ್ಲಿ ಸುಟ್ಟ ರುಚಿ ಇದ್ದರೆ ಒಂದು ಚಿವುಟು ಉಪ್ಪು ಸೇರಿಸಿ ಸರಿಪಡಿಸಬಹುದು ಉಪ್ಪನ್ನು ಹಾಲು ಬಿಸಿಯಾಗಿರುವಾಗಲೇ ಹಾಕಬೇಕು. ಹಾಲಿನ ಕೆನೆಯ ಸಾರನ್ನು ತೆಗೆದು ತಿರುಪು ಮುಚ್ಚಳವಿರುವ ಬಾಟಲಿಯೊಳಗೆ ಹಾಕಿ ಸ್ವಲ್ಪ ನೀರು ಸೇರಿಸಿ 5 ರಿಂದ 10 ನಿಮಿಷಗಳ ಮತ್ತು ಬಲವಾಗಿ ಸಿಲುಕಿಸಿದರೆ ಸುಲಭವಾಗಿ ಬೆನ್ನಿ ಮತ್ತು ಮಜ್ಜಿಗೆ ತಯಾರಿಸಬಹುದು. ಚಳಿಗಾಲದಲ್ಲಿ ಸ್ವಲ್ಪ ಬಿಸಿ ನೀರು ಸೇರಿಸಿದರೆ ಬೆಣ್ಣೆಯನ್ನು ಬೇರ್ ಪಡಿಸಲಿಕ್ಕೆ ಸುಲಭವಾಗುತ್ತದೆ. ಬೇಸಿಗೆ ಕಾಲದಲ್ಲಿ ಆದರೆ ಮೊಸರನ್ನು ಕುಲುಕಿ ಸಿದ ಬಳಿಕ ಕೆಲವು ಮಂಜುಗಡ್ಡೆಯ ತುಂಡುಗಳನ್ನು ಸೇರಿಸಬಹುದು. ಬೇಸಿಗೆ ಕಾಲದಲ್ಲಿ ಹಾಲು ಶರಬತ್ತು ಸಕ್ಕರೆ ಪಾನಕ ಇತ್ಯಾದಿಗಳು ಕೆಟ್ಟು ಹೋಗುವುದನ್ನು ತಡೆಗಟ್ಟುವರೇ ಮಸ್ಲಿಂ ಬಟ್ಟೆಯೊಂದನ್ನು ಸಮಾಂಶ ನೀರು ಮತ್ತು ಆರ್ಥಿಕ ಮಧ್ಯ ಕಲುಕಿದ ದ್ರಾವಣದಲ್ಲಿ ನೆನೆಸಿದ ಹಿಂಡಿ ತೆಗೆದು ಹಾಲು ಮತ್ತಿತರ ಬಾಟಲಿಗಳನ್ನು ಆ ಬಟ್ಟೆಯಿಂದ ಸುತ್ತಿ ಇಟ್ಟುಕೊಳ್ಳಬೇಕು ಮನೆಯೊಳಗೆ ಮಂಜುಗಡ್ಡೆ ಇಲ್ಲದಿರುವ ಸಂದರ್ಭದಲ್ಲಿ ಮೇಲ್ಕಂಡ ದ್ರಾವಣ ಪ್ರಯೋಗಿಸಿ ಯಾವುದೇ ದ್ರವವನ್ನು ಅತಿ ಶೀಘ್ರವಾಗಿ ತಂಪು ಮಾಡಿಕೊಳ್ಳಬಹುದು. ಹಾಲನ್ನು ಕಾಯಿಸುವ ಮುಂಚೆ ಹಾಲಿನ ಪಾತ್ರೆಯನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಬೇಕು. ಇದರಿಂದಾಗಿ ಹಾಲು ಪಾತ್ರೆಯೊಳಗೆ ತಾಗಿ ಹಿಡಿದು ಹೊಂದಿರಲಾರದು ಅದಕ್ಕೆ ತೊಳೆಯಲಿಕ್ಕೆ ಸುಲಭವಾಗುವು

ಕುದುರೆ ಹಾಲು ಹೃದಯ ರೋಗಕ್ಕೆ ರಾಮಬಾಣ

ಕುದುರೆ ಹಾಲು ಕುಡಿದರೆ ಹೃದಯ ರೋಗ ಬರುವ ಸಂಭವ ತುಂಬಾ ಕಡಿಮೆ ಎಂದು ಮಂಗೋಲಿಯಾದ ದೇಶಿಯ ವೈದ್ಯರು ಹೇಳುತ್ತಾರೆ. ಮಂಗೋಲಿಯಾದ ದೇಸೀ ವೈದ್ಯ ಪದ್ಧತಿ ಸಂಸ್ಥೆಯ ವೈದ್ಯರು ತಿಳಿಸಿದಂತೆ ಕುದುರೆ ಹಾಗೂ ರಕ್ತದ ಒತ್ತಡವನ್ನು ಹಾಗೂ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಹೃದಯದ ಕೆಲಸದ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಕೂಡ ಮಂಗೋಲಿಯದ ವೈದ್ಯರು ಕೊಂಡುಕೊಂಡಿದ್ದಾರೆ. ಹೃದಯ ವ್ಯಾಧಿ ಇರುವ 500 ರೋಗಿಗಳಿಗೆ ಮಂಗೋಲಿಯಾದ ಸಂಸ್ಥೆಯಲ್ಲಿ ಕುದುರೆ ಹಾಲಿನ ಚಿಕಿತ್ಸೆ ನೀಡಲಾಗಿತ್ತು. ಇದರಿಂದ ರಕ್ತದ ಒತ್ತಡ ಶೇಕಡ 75.5ರಷ್ಟು ಹಾಗೂ ಕೊಬ್ಬಿನ ಅಂಶ ಶೇಕಡ 90 ಕಡಿಮೆ ಆಯಿತು. ಕುದುರೆ ಹಾಲು ಮಂಗೋಲಿಯಾದಲ್ಲಿ ಹಿಂದಿನಿಂದಲೂ ಆರೋಗ್ಯವರ್ಧಕ ಪಾನೀಯ ಆಗಿದ್ದು ಮನೆಗೆ ಬಂದ ಅತಿಥಿಗಳಿಗೆ ವಿಶೇಷವಾಗಿ ಉಣಬಡಿಸುವ ಸಂಪ್ರದಾಯವಾಗಿದೆ.

ಯೋಗ ಒಂದು ಜೀವನ ದರ್ಶನ

ಯೋಗ ಒಂದು ಜೀವನ ದರ್ಶನ ಯೋಗವು ಒಂದು ಜೀವನ ದರ್ಶನವಿದೆ. ಯೋಗ ಆತ್ಮಾನುಶಾಸನ ವಾಗಿದೆ. ಯೋಗ ಒಂದು ಜೀವನ ಪದ್ಧತಿಯಾಗಿದೆ. ಯೋಗ ವ್ಯಾಧಿಮುಕ್ತ ಮತ್ತು ಸಮಾಧಿಯುಕ್ತ ಜೀವನದ ಸಂಕಲ್ಪನೆಯಾಗಿದೆ. ಯೋಗ ಆತ್ಮ ಉಪಚಾರ ಮತ್ತು ಆತ್ಮ ದರ್ಶನದ ಶ್ರೇಷ್ಠ ಆಧ್ಯಾತ್ಮಿಕ ವಿದ್ಯೆಯಾಗಿದೆ. ಯೋಗ ವ್ಯಕ್ತಿತ್ವವನ್ನು ವಾಮನನನಿಂದ ವಿರಾಟ ಮಾಡುವ ಈ ಸಮಗ್ರ ರೂಪದಿಂದ ತನ್ನನ್ನು ರೂಪಾಂತರ ವಿಕಸಿತ ಮಾಡಿಕೊಳ್ಳುವ ಆಧ್ಯಾತ್ಮಿಕ ವಿದ್ಯೆಯಾಗಿದೆ. ಯೋಗ ಕೇವಲ ವೈಕಲ್ಪಿಕ ಚಿಕಿತ್ಸೆ ಪದ್ಧತಿ ಮಾತ್ರವಲ್ಲ ಅನಿಸಿತು ಯೋಗದ ಪ್ರಯೋಗ ಪರಿಣಾಮಗಳ ಮೇಲೆ ಆಧಾರಿತವಾಗಿರುವ ಒಂದು ಎಂಥ ಪ್ರಮಾಣವೆಂದರೆ ಅದು ವ್ಯಾಧಿಯನ್ನು ನಿರ್ಮೂಲನೆ ಮಾಡುತ್ತದೆ. ಅಂತಃಕರಣಕ್ಕೆ ಇದು ಒಂದು ಸಂಪೂರ್ಣ ವಿಧದ ಶರೀರ ರೋಗ ಮಾರ್ಗವಲ್ಲದೆ ಬದಲಿಗೆ ಮಾನಸಿಕ ರೋಗದ ಚಿಕಿತ್ಸೆಯು ಶಾಸ್ತ್ರವಾಗಿದೆ. ಯೋಗ ಅಲೋಪತಿ ತರಹದ ಯಾವ ಲಕ್ಷಷಣಿಕ ಚಿಕಿತ್ಸೆ ಅಲ್ಲ ಅಂದರೆ ರೋಗಗಳ ಮೂಲ ಕಾರಣವನ್ನು ನಿರ್ಮೂಲನೆ ಮಾಡಿ ನಮಗೆ ಒಳಗಿನಿಂದ ಆರೋಗ್ಯ ಪ್ರದಾನ ಮಾಡುತ್ತದೆ. ಯೋಗವನ್ನುು ಮಾತ್ರ ಒಂದು ವ್ಯಾಯಾಮದ ನೋಡು ಅಥವಾ ವರ್ಗ ವಿಶೇಷ ಪೂಜೆ ನೋಡುವುದು ಸಂಕೀರ್ಣತಪೂರ್ಣ ಅವಿವೇಕ ದೃಷ್ಟಿಕೋನ ವಾಗಿದೆ. ಸ್ವಾಸ್ಥ, ಆಗ್ರಹ, ಅಜ್ಞಾನ ಅಥವಾ ಅಹಂಕಾರದಿಂದ ಮೇಲೆ ಬಂದು ಯೋಗವನ್ನು ಒಂದುು ಸಂಕೀರ್ಣ ಜ್ಞಾನದ ರೀತಿಯಲ್ಲಿ ನೋಡಬೇಕಾಗಿದೆ. ಯೋಗಕ್ಕೆ ಪೌರಾಣಿಕ ಮಾನ್ಯತೆ ಇದೆ. ಅಷ್ಟಟ ಚಕ್ರಗಳು ಜಾಗೃತಗೊಳ್ಳುತ್ತವೆ ಅಥವಾ ಪ್ರಾಣಯಾಮ