ಹಾಲನ್ನು ಸಂರಕ್ಷಿಸುವ ವಿಧಾನವನ್ನು ತಿಳಿದುಕೊಳ್ಳಿ

ಹಾಲು-


ಹಾಲುಕಾಯಿಸುವಾಗ ಅಜಾಗೃತಿಯಿಂದ ಉರಿದು ಹೋಗಿ ಅದರಲ್ಲಿ ಸುಟ್ಟ ರುಚಿ ಇದ್ದರೆ ಒಂದು ಚಿವುಟು ಉಪ್ಪು ಸೇರಿಸಿ ಸರಿಪಡಿಸಬಹುದು ಉಪ್ಪನ್ನು ಹಾಲು ಬಿಸಿಯಾಗಿರುವಾಗಲೇ ಹಾಕಬೇಕು.

ಹಾಲಿನ ಕೆನೆಯ ಸಾರನ್ನು ತೆಗೆದು ತಿರುಪು ಮುಚ್ಚಳವಿರುವ ಬಾಟಲಿಯೊಳಗೆ ಹಾಕಿ ಸ್ವಲ್ಪ ನೀರು ಸೇರಿಸಿ 5 ರಿಂದ 10 ನಿಮಿಷಗಳ ಮತ್ತು ಬಲವಾಗಿ ಸಿಲುಕಿಸಿದರೆ ಸುಲಭವಾಗಿ ಬೆನ್ನಿ ಮತ್ತು ಮಜ್ಜಿಗೆ ತಯಾರಿಸಬಹುದು. ಚಳಿಗಾಲದಲ್ಲಿ ಸ್ವಲ್ಪ ಬಿಸಿ ನೀರು ಸೇರಿಸಿದರೆ ಬೆಣ್ಣೆಯನ್ನು ಬೇರ್ ಪಡಿಸಲಿಕ್ಕೆ ಸುಲಭವಾಗುತ್ತದೆ. ಬೇಸಿಗೆ ಕಾಲದಲ್ಲಿ ಆದರೆ ಮೊಸರನ್ನು ಕುಲುಕಿ ಸಿದ ಬಳಿಕ ಕೆಲವು ಮಂಜುಗಡ್ಡೆಯ ತುಂಡುಗಳನ್ನು ಸೇರಿಸಬಹುದು.

ಬೇಸಿಗೆ ಕಾಲದಲ್ಲಿ ಹಾಲು ಶರಬತ್ತು ಸಕ್ಕರೆ ಪಾನಕ ಇತ್ಯಾದಿಗಳು ಕೆಟ್ಟು ಹೋಗುವುದನ್ನು ತಡೆಗಟ್ಟುವರೇ ಮಸ್ಲಿಂ ಬಟ್ಟೆಯೊಂದನ್ನು ಸಮಾಂಶ ನೀರು ಮತ್ತು ಆರ್ಥಿಕ ಮಧ್ಯ ಕಲುಕಿದ ದ್ರಾವಣದಲ್ಲಿ ನೆನೆಸಿದ ಹಿಂಡಿ ತೆಗೆದು ಹಾಲು ಮತ್ತಿತರ ಬಾಟಲಿಗಳನ್ನು ಆ ಬಟ್ಟೆಯಿಂದ ಸುತ್ತಿ ಇಟ್ಟುಕೊಳ್ಳಬೇಕು ಮನೆಯೊಳಗೆ ಮಂಜುಗಡ್ಡೆ ಇಲ್ಲದಿರುವ ಸಂದರ್ಭದಲ್ಲಿ ಮೇಲ್ಕಂಡ ದ್ರಾವಣ ಪ್ರಯೋಗಿಸಿ ಯಾವುದೇ ದ್ರವವನ್ನು ಅತಿ ಶೀಘ್ರವಾಗಿ ತಂಪು ಮಾಡಿಕೊಳ್ಳಬಹುದು.

ಹಾಲನ್ನು ಕಾಯಿಸುವ ಮುಂಚೆ ಹಾಲಿನ ಪಾತ್ರೆಯನ್ನು ತಣ್ಣೀರಿನಿಂದ ಚೆನ್ನಾಗಿ ತೊಳೆಯಬೇಕು. ಇದರಿಂದಾಗಿ ಹಾಲು ಪಾತ್ರೆಯೊಳಗೆ ತಾಗಿ ಹಿಡಿದು ಹೊಂದಿರಲಾರದು ಅದಕ್ಕೆ ತೊಳೆಯಲಿಕ್ಕೆ ಸುಲಭವಾಗುವುದು.

ಹಾಲು ಕರೆಯುವಾಗ ಹಸು ಅಥವಾ ಎಮ್ಮೆ ಯನ್ನು ಬಿಸಿಲಿನಲ್ಲಿ ನಿಲ್ಲಿಸಬಾರದು. ಹಸು ಮತ್ತು ಎಮ್ಮೆಗಳನ್ನು ಬಿಸಿಲಿನಲ್ಲಿ ನಿಲ್ಲಿಸಿ ಹಾಲು ಕರೆದರೆ ನೆರಳಿನಲ್ಲಿ ನಿಲ್ಲಿಸಿ ಕರೆಯುವಾಗ ಸಿಗುವಷ್ಟು ಹಾಲು ಸಿಗಲಾರದು.

ಹಾಲು ಕಾಯಿಸುವ ಮುಂಚೆ ಪಾತ್ರೆಯ ಒಳಭಾಗವನ್ನು ಮೊದಲು ತಣ್ಣೀರಿನಿಂದ ತೊಳೆದು ಆಮೇಲೆ ಬಿಸಿ ನೀರಿನಿಂದ ತೊಳೆದರೆ ಹಾಲು ಸುಡಲಾರದು.
ಬೇಸಿಗೆ ಕಾಲದಲ್ಲಿ ಹಾಲು ಕುಡಿಯುವುದನ್ನು ತಡೆಗಟ್ಟಬೇಕಾದರೆ ಬೆಳಗ್ಗೆ ಹಾಲು ಬಂದೊಡನೆ ಅದರೊಳಗೆ ಸಣ್ಣದೊಂದು ಮೂಲಂಗಿ ತುಂಡನ್ನು ಹಾಕಿ ಇಡಬೇಕು.
ಒಂದು ದಿನದ ಹಾಲನ್ನು ಎಂದಿಗೂ ಇನ್ನೊಂದು ದಿನದ ಹಾಲಿನೊಡನೆ ಬೆರೆಸಿಟ್ಟು ಕೊಳ್ಳಬಾರದು. ನೊಣ ಧೂಳುಧೂಳು ಗಳಿಂದ ಕಾಪಾಡಬೇಕಾದರೆ ಹಾಲಿನ ಪಾತ್ರೆಗಳನ್ನೆಲ್ಲಾ ಮುಚ್ಚಿದ ಬಿದ್ದರೆ ಆ ಹಾಲು ಇತರ ಆಹಾರ ವಸ್ತುಗಳ ವಾಸನೆಯನ್ನು ಹೀರಿಕೊಳ್ಳುವುದು.ನಿಮ್ಮಲ್ಲಿ ಶೀತ ಯಂತ್ರೋಪಕರಣ ಇಲ್ಲವಾದರೂ ಹಾಲನ್ನು ಕೆಟ್ಟು ಹೋಗದಂತೆ ಇಟ್ಟುಕೊಳ್ಳಬೇಕಾದರೆ ಇದಕ್ಕೆ ಮೊದಲು ಹೇಳಿರುವಂತೆ ಬಾಟಲಿಗಳನ್ನು ಬಟ್ಟೆ ಸುತ್ತಿ ತಣ್ಣೀರಿನಲ್ಲಿ ಇಡಬಹುದು ಆದರೆ ಹಾಲನ್ನು ಎರಡಾವರ್ತಿ ಬೆಳಗ್ಗೆ ಮತ್ತು ಸಾಯಂಕಾಲ ಇಟ್ಟುಕೊಂಡರೆ ಅದು ಅಷ್ಟು ಸುಲಭ ಹಾಗೂ ಉಚಿತ ಉಪಾಯ ಬೇರೆ ಯಾವುದೂ ಇಲ್ಲ.
ಹಾಲನ್ನು ಬೆಳಗ್ಗೆ ಕಾಯಿಸುವ ಮುಂಚೆ ಮತ್ತು ಇನ್ನೊಮ್ಮೆ ಸಾಯಾಂಕಾಲದ ಹೊತ್ತಿನಲ್ಲಿ ಹಾಲಿಗೆ ಒಂದು ಚಿವುಟು ಅಡುಗೆ ಸೋಡಾವನ್ನು ಸೇರಿಸಿದರೆ ಆಹಾಲು ಹೆಪ್ಪುಗಟ್ಟುವುದನ್ನು ತಡೆಗಟ್ಟಬಹುದು.
ಹಾಲು ಇಟ್ಟುಕೊಳ್ಳುವುದಕ್ಕೆ ಯಾವಾಗಲೂ ನೆಟ್ಟಗಿರುವ ಮತ್ತು ಅಗಲವಾದ ಬಾಯಿ ಇರುವ ಪಾತ್ರೆಯನ್ನು ಉಪಯೋಗಿಸಬೇಕು. ತೊಳೆಯಲಿಕ್ಕೆ ಪ್ರಯಾಸವಾಗುವ ಪಾತ್ರೆಗಳನ್ನು ಹಾಲನ್ನಿಟ್ಟುಕೊಳ್ಳಲು ಉಪಯೋಗಿಸಕೂಡದು. ಹಾಲಿನ ಪಾತ್ರೆ ಗಳನ್ನು ಚೆನ್ನಾಗಿ ಹಾಗೂ ಶುಚಿಯಾಗಿ ತೊಳೆಯದಿದ್ದರೆ ಅದರಲ್ಲಿ ಹಾಕಿದ ಹಾಲು ಹುಳಿಯಾಗಿ ಹಾಳಾಗುತ್ತದೆ.
ಹಾಲನ್ನು ಇಟ್ಟುಕೊಳ್ಳುವ ಎಲ್ಲಾ ಪಾತ್ರಗಳನ್ನು ಮೊದಲು ತಣ್ಣೀರಿನಿಂದ ತೊಳೆದು ಆ ಬಳಿಕ ಕುದಿಯುತ್ತಿರುವ ನೀರಿನಲ್ಲಿ ತೊಳೆದು ನಂತರ ಶುದ್ಧವಾದ ನೀರಿನಿಂದ ತೊಳೆಯಬೇಕು.ಅವುಗಳನ್ನು ಬೇರೆ ತಟ್ಟೆಗಳನ್ನು ಒರೆಸಲು ಉಪಯೋಗಿಸದ ಬಟ್ಟೆಗಳಿಂದ ಒರೆಸಬಾರದು.ಹಹಾಲನ್ನು ಕೆಲವು ತಾಸುಗಳ ಹೊತ್ತು ಇಟ್ಟುಕೊಳ್ಳ ಬೇಕೆಂದಿದ್ದರೆ ಅದು ಬಂದೊಡನೆ ಉಷ್ಣತೆ ಕಾಪಾಡುವ ಸೀಸೆಯೊಳಗೆ ಹಾಕಿ ಭದ್ರವಾಗಿ ಮುಚ್ಚಿಟ್ಟುಕೊಳ್ಳಬೇಕು.

Comments

Popular posts from this blog

Sneha yoni / Snehaashaya, Panchakarma

Dagdha Vrana (burns), Shalya tantra

Swedana karma