ನೆಗಡಿಗೆ ಮನೆ ಮದ್ದು ಔಷಧಿ ತಿಳಿದುಕೊಳ್ಳಿ

ನೆಗಡಿ-

 

ಬಿಸಿಯಾರು ಟೀ ಗೆ ನಿಂಬೆಹಣ್ಣಿನ ರಸ ಹಿಂಡಿ ಸೇವಿಸುವುದರಿಂದ ನೆಗಡಿ ಗುಣವಾಗುವುದು.

ಬಿಸಿ ಹಾಲಿಗೆ ಕಾಳು ಮೆಣಸಿನ ಪುಡಿ ಮತ್ತು ಕಲ್ಲುಸಕ್ಕರೆ ಸೇರಿಸಿ ಕುಡಿಯುವುದರಿಂದ ನೆಗಡಿ ಗುಣವಾಗುತ್ತದೆ.

ಆಗಾಗ್ಗೆ ನೆಗಡಿಯನ್ನು ಅನುಭವಿಸುವವರು ಅನಾನಸು(fineapple) ಹಣ್ಣನ್ನು ತಿಂದರೆ ಒಳ್ಳೆಯದು.

ಓಮ ಮತ್ತು ಅರಸಿನಪುಡಿಯ ಸಮಾಂಶ ತೆಗೆದುಕೊಂಡು ಕೆಂಡದ ಮೇಲೆ ಸಿಂಪಡಿಸಿ ಬರುವ ಹೊಗೆಯನ್ನು ಮೂಗಿನೊಳಗೆ ತಿಳಿದುಕೊಳ್ಳುವುದರಿಂದ ನೆಗಡಿಯು ಎಷ್ಟು ಕಷ್ಟ ಕೊಡುತ್ತಿದ್ದರೂ ಕೂಡ ಗುಣವಾಗುತ್ತದೆ.

ಐವತ್ತು ಗ್ರಾಂ ಹುರಳಿ 10 ಗ್ರಾಂ ನೆಲ್ಲಿಚಟ್ಟು 3 ಗ್ರಾಂ ಹಿಪ್ಪಲಿ ಇವುಗಳನ್ನು ಕುಟ್ಟಿ ಅಷ್ಟಾಂಶ ಕಷಾಯ ಮಾಡಿ ಶೋಧಿಸಿ ಕುಡಿದರೆ ವಿಶೇಷವಾಗಿ ನೀರು ಸುರಿಯುತ್ತಿರುವ ನೆಗಡಿ ಗುಣವಾಗುತ್ತದೆ.

ಮೂಗಿನಹೊರಭಾಗದಲ್ಲ ಬುಡದಲ್ಲಿ ಸ್ವಲ್ಪ ಸಾಸಿವೆ ಎಣ್ಣೆಯನ್ನು ಹಚ್ಚಿದರೆ ನೆಗಡಿ ಗುಣವಾಗುತ್ತದೆ.

ಹುರಿದು ಬಿಸಿ ಮಾಡಿದ ಮರಳಿನಿಂದ ಅಥವಾ ಅಡುಗೆ ಮನೆಯೊಳಗೆ ದೂರು ಮತ್ತಿತ್ತರ ಹೊಲಸನ್ನು ಒರೆಸುವ ಬಟ್ಟೆಯನ್ನು ಬೆಂಕಿಯ ಕೆಂಡದಿಂದ ಕಾಯಿಸಿ ಆ ವಸ್ತ್ರದಿಂದ ಹಣೆ ಎದೆ ಇತ್ಯಾದಿಗಳಿಗೆ ಶಾಖ ಕೊಟ್ಟು ದಪ್ಪ ಕಂಬಳಿಯಿಂದ ಹೊದಿಸಿ ಮಲಗಿಸಿದರೆ ನೆಗಡಿ ಗುಣವಾಗುವುದು.

ಕಿತ್ತಳೆ ಹಣ್ಣಿನ ರಸ ಯಥೇಪ್ಟವಾಗಿ  ಸೇವಿಸುವುದರಿಂದಲೂ ಲೆಟ್ಯೂಸ್ ಟೊಮೆಟೊ ಕ್ಯಾರೆಟ್ ಎಲೆಕೋಸು ಕೊತ್ತಂಬರಿ ಸೊಪ್ಪು ಇವುಗಳನ್ನು ಕೋಸಂಬರಿ ತಯಾರಿಸಿ ಸೇವಿಸುವುದರಿಂದಲೂ ನೆಗಡಿ ವಾಸಿಯಾಗುತ್ತದೆ.

ಒಂದು ಗ್ಲಾಸ್ ನೀರಿಗೆ ಅರ್ಧ ಟೀ ಚಮಚ ದಾಲ್ಚಿನ್ನಿ ಜೀವನ ಮತ್ತು ಒಂದು ಚಿಟಿಕೆ ಕಾಳುಮೆಣಸಿನ ಹುಡಿ ಸೇರಿಸಿ ಕುದಿಸಿ ಕಷಾಯ ಮಾಡಿ ಅದಕ್ಕೆ ಒಂದು ಚಮಚ ಜೇನುತುಪ್ಪ ಸೇರಿಸಿ ದಿನಕ್ಕೆ 3 ಸಲಾ ಸೇವಿಸುವುದು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma