ಮಧುಮೇಹ ಅಥವಾ ಸಿಹಿಮೂತ್ರ ರೋಗದ ಲಕ್ಷಣಗಳು ಹಾಗೂ ಮನೆ ಮದ್ದು

ಮಧುಮೇಹ ಅಥವಾ ಸಿಹಿಮೂತ್ರ ರೋಗದ ಲಕ್ಷಣಗಳು-

ಸಿಹಿ ಮೂತ್ರ ರೋಗಿಗಳ ರಕ್ತದಲ್ಲಿನ ಮತ್ತು ಮೂತ್ರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ರೋಗಿಗೆ ಪದೇ-ಪದೇ ಮೂತ್ರ ವಿಸರ್ಜನೆಯಾಗುತ್ತದೆ ಮತ್ತು ಮೂತ್ರದ ಪ್ರಮಾಣವೂ ಹೆಚ್ಚುವುದು. ಮೂತ್ರದ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವುದು. ರೋಗಿಗೆ ಹಸಿವು ಬಾಯಾರಿಕೆ ಹೆಚ್ಚುವುದು. ಎಷ್ಟು ಆಹಾರ ಸೇವಿಸಿದರೂ ಬಲಹೀನತೆ, ಆಯಾಸ, ತೂಕಡಿಕೆ, ನವೆ ಮತ್ತು ಕುರುಗಳು ಉಂಟಾಗುವವು. ಈ ವ್ಯಾಧಿಗೆ ಸಂಪೂರ್ಣ ಪರಿಹಾರ ಇಲ್ಲವಾದರೂ ಯೋಗ್ಯವಾದ ಚಿಕಿತ್ಸೆಗಳ ಮೂಲಕ ಅದನ್ನು ಸಮಗ್ರವಾಗಿ ಹತೋಟಿಯಲ್ಲಿ ಇಡಬಹುದು.


ಮಧುಮೇಹ ರೋಗಿಗಳು ಸಿಹಿ ಪದಾರ್ಥಗಳನ್ನು ಸೇವಿಸದಿರುವುದು ಕ್ಷೇಮ ಅನ್ನ, ಶರ್ಕರ, ಪಿಷ್ಟಗಳನ್ನು ಆದಷ್ಟು ಕಡಿಮೆ ಮಾಡಬೇಕು. ಬ್ರೆಡ್, ಆಲೂಗಡ್ಡೆ, ಕೇಕ್, ಬಿಸ್ಕತ್ತು, ಬಾಳೆಹಣ್ಣು , ಕಾಫಿ, ಚಹಾ, ಹೊಗೆಸೊಪ್ಪು, ಮಧ್ಯ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು.


ನಿತ್ಯ ಆಹಾರದಲ್ಲಿ ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಸಿಹಿಮೂತ್ರ ರೋಗ ಮತ್ತು ಅಧಿಕ ರಕ್ತದ ಒತ್ತಡ ಉಂಟಾಗುವ ಸಂಭವವಿರುತ್ತದೆ. ಆದುದರಿಂದ ಮಾನವನು ಉಪ್ಪನ್ನು ಆದಷ್ಟು ಕಡಿಮೆ ಯಾಗಿ ಸೇವಿಸುವುದು ಉತ್ತಮ.


ಮಧುಮೇಹ ಸಿಹಿಮೂತ್ರ ರೋಗವನ್ನು ಸಂಪೂರ್ಣ ಹತೋಟಿಯಲ್ಲಿಡುವ ಕೆಲವು ಚಿಕಿತ್ಸೆಗಳನ್ನು ಈ ಕೆಳಗೆ ವಿವರಿಸಲಾಗಿದೆ:-

ಕೆಲವು ಬೇವಿನ ಎಲೆಗಳನ್ನು ಎರಡರಿಂದ ಮೂರು ದಿನ ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಓಮದ (ಅಜವಾನ) ಬೆರೆಸಿ ಗಾಜಿನ ಬಾಟಲಿ ಒಳಗೆ ಅಥವಾ ಜಾಡಿಯೊಳಗೆ ತುಂಬಿಸಿಕೊಳ್ಳಬೇಕು. ಒಂದು ಟೀ ಚಮಚದಷ್ಟು ಈ ಮಿಶ್ರಣವನ್ನು ಬಿಸಿ ಹಾಲಿನಲ್ಲಿ ಬೆರೆಸಿ ಪ್ರತಿದಿನ ರಾತ್ರಿ ಮಲಗುವ ಮುಂಚೆ ಒಂದು ತಿಂಗಳ ತನಕ ಸೇವಿಸುವುದರಿಂದ ಸಿಹಿಮೂತ್ರ ರೋಗವನ್ನು ಸಂಪೂರ್ಣ ಹತೋಟಿಯಲ್ಲಿ ಇಡಬಹುದು.

10 ಗ್ರಾಂ ತುಂಬೆಯ ಸೊಪ್ಪಿಗೆ 2 ಕರಿಮಣಸಿನ ಕಾಳುಗಳನ್ನು ಸ್ವಲ್ಪ ನೀರಿನಲ್ಲಿ ಅರೆದು ಅಥವಾ ತೇದು 21 ದಿವಸ ಸೇವಿಸುವುದು.

ಬೇವಿನ ಕೆಲವು ಚಿಗುರೆಲೆಗಳನ್ನು ಚಿಗುರು ಎಲೆಗಳನ್ನು ಚೆನ್ನಾಗಿ ಅರೆದು ಸಣ್ಣ ಮಾತ್ರೆಗಳ ಗೆ ಮಾಡಿ ಒಣಗಿಸಿ ಇಟ್ಟುಕೊಳ್ಳಬೇಕು. ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಗೆ ಒಂದರಿಂದ ಎರಡು ಮಾತ್ರೆಗಳನ್ನು ಸೇವಿಸಿ ಸ್ವಲ್ಪ ನೀರು ಕುಡಿಯುವುದು.

ಮಧುಮೇಹದ ರೋಗಿಗಳು ನೇರಳೆಹಣ್ಣುಗಳನ್ನು ಅಥವಾ ರಸ ತೆಗೆದು ಸೇವಿಸುವುದರಿಂದ ಸಹಕಾರಿಯಾಗುತ್ತದೆ.

ನೇರಳೆ ಹಣ್ಣಿನ ಬೀಜಗಳನ್ನು ಚೆನ್ನಾಗಿ ಒಣಗಿಸಿ ಬಾಣಲೆಯಲ್ಲಿ ಹಾಕಿ ಸ್ವಲ್ಪ ಹುರಿದು ಕುಟ್ಟಿ ಚುರ್ಣ ಮಾಡಿ ಇಟ್ಟುಕೊಳ್ಳಬೇಕು. ಒಂದು ಟೀ ಚಮಚದಷ್ಟು ಈ ಚೂರ್ಣವನ್ನು ಅರ್ಧ ಲೋಟ ನೀರಿನಲ್ಲಿ ಕುಡಿಸಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಗೆ 21 ದಿವಸ ಸೇವಿಸುವುದು.

ತಗಡಿ ಗಿಡದ ಎಲೆಗಳನ್ನು ನೀರಿನಲ್ಲಿ ಕುದಿಸಿ 1/4 ಕಷಾಯ ಮಾಡಿ ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಗೆ 21 ದಿವಸಗಳ ವರೆಗೆ ಸೇವಿಸುವುದು.

ಮಧುಮೇಹದ ರೋಗಿಗಳು ಆಗಿಂದಾಗೆ ಹಾಗಲಕಾಯಿಯನ್ನು ಸೇವಿಸುವುದು ಹಿತಕರ. ಇದರಿಂದ ಈ ಕಾಯಿಲೆಯನ್ನು ಗುಣಪಡಿಸಲು ಬಹಳ ಉಪಯೋಗ ಆಗುತ್ತದೆ. ಪದೇ ಪದೇ ಹಾಗಲಬಳ್ಳಿ ಸೊಪ್ಪಿನ ಕಹಿ ಕಷಾಯ ತಯಾರಿಸಿ ಸೇವಿಸುವುದರಿಂದ ಬಹಳ ಪ್ರಯೋಜನ ಸಿಗುತ್ತದೆ.

250 ಗ್ರಾಂ ಇಡಿ ಗೋಧಿ ಕಾಳುಗಳನ್ನು ಹಿಂದಿನ ರಾತ್ರಿ ಸ್ವಲ್ಪ ನೀರಿನಲ್ಲಿ ನೆನೆಹಾಕಿ ಮರುದಿನ ಬೆಳಗ್ಗೆ ಗೋಧಿಯನ್ನು ಸೋಸಿ ತೆಗೆದು ಅದಕ್ಕೆ ಮೂರರಿಂದ ನಾಲ್ಕು ಕರಿಮೆಣಸಿನ ಕಾಳು ಮತ್ತು 15 ಗ್ರಾಂ ಶುಂಠಿ ಸೇರಿಸಿ ಚೆನ್ನಾಗಿ ಅರೆದು ನೆನೆ ಹಾಕಿದ ನೀರನ್ನು ಹಾಕಿ ಚೆನ್ನಾಗಿ ಕದಡಿ ತೆಳುವಾದ ಬಟ್ಟೆಯಿಂದ ಸೊಸಿ ಹಸಿದ ಹೊಟ್ಟೆಗೆ 21 ದಿನಗಳ ತನಕ ಸೇವಿಸುವುದು.

ಬಿಲ್ವಪತ್ರೆಯ ಎಲೆಗಳನ್ನು ಅರೆದು ರಸ ತೆಗೆದು ಪ್ರತಿದಿನ ಬೆಳಗ್ಗೆ ಹಸಿದ ಹೊಟ್ಟೆಗೆ ಸೇವಿಸುವುದು 21 ದಿನಗಳು.

ನೆಲ ನೆಲ್ಲಿ ಗಿಡದ ಕಷಾಯ ಮಾಡಿ 21 ದಿವಸ ಸೇವಿಸುವುದು.

ಬಾಳೆ ಗಿಡದ ಕಾಂಡದ ಒಳಗಿನ ತಿರುಳನ್ನು ತೆಗೆದು ಚೆನ್ನಾಗಿ ಒಣಗಿಸಿ ಕುಟ್ಟಿ ಚುರ್ಣಿಸಿ ಗಾಳಿಗೆ ಇಟ್ಟುಕೊಳ್ಳಿ ಇದರಿಂದ ಚೂರನ್ನು ಸೇರಿಸಿ ಸ್ವಲ್ಪ ನೀರು ಕುಡಿಯುವುದು.

ಬೇವಿನ ಎಲೆಗಳ ಕಷಾಯ ಮಾಡಿ ವಾರದಲ್ಲಿ ಮೂರರಿಂದ ನಾಲ್ಕು ದಿವಸ ಬೆಳಗ್ಗೆ ೪ ವಾರಹಸಿದ ಹಸಿದ ಹೊಟ್ಟೆಗೆ ಸೇವಿಸುವುದು.

ಸಿಹಿಮೂತ್ರ ರೋಗಿಗಳು ಖರ್ಜೂರವನ್ನು ಸೇವಿಸಿದರೆ ಒಳ್ಳೆಯದು ಖರ್ಜೂರದಿಂದ ಮಧುಮೇಹ ರೋಗಿಗಳಿಗೆ ಅಪಾಯವಿರುವುದಿಲ್ಲ.

ಮೆಂತೆ ಸೊಪ್ಪಿನಿಂದ ಅವಾಗಲೇ ತೆಗೆದ ಒಂದು ಚಮಚ ದಿನಾಲೂ ಬೆಳಗ್ಗೆ ಹಸಿದ ಹೊಟ್ಟೆಗೆ ಸೇವಿಸುವುದು 90 ದಿನಗಳ ಕಾಲ.

ಪ್ರತಿದಿನ ಹತ್ತರಿಂದ ಹನ್ನೆರಡು ಕರಿಬೇವಿನ ಎಲೆಗಳನ್ನು ಸುಮಾರು 100 ದಿನಗಳ ಕಾಲ ಸೇವಿಸುವುದು. ದಿನನಿತ್ಯದ ಆಹಾರದಲ್ಲಿ 25 ರಿಂದ 100 ಗ್ರಾಂ ಮೆಂತೆಯ ಬೀಜಗಳನ್ನು ಸೇವಿಸುವುದರಿಂದ ಸಿಹಿ ಮೂತ್ರ ದ ರೋಗವನ್ನು ಸಂಪೂರ್ಣವಾಗಿ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಆಗುತ್ತದೆ.


ಮೆಂತೆಯ ಬೀಜಗಳನ್ನು ದೋಸೆ, ಚಪಾತಿ, ರೊಟ್ಟಿ, ರಸಂ, ಸಾರು ಇತ್ಯಾದಿಗಳಲ್ಲಿ ಕೂಡಿಸಿ ಸೇವಿಸಬಹುದು ಎಂದು ಹೈದರಾಬಾದಿನ national institute of nutrition ಅವರು ಕಂಡುಹಿಡಿದಿದ್ದಾರೆ. ಅದಲ್ಲದೇ ಈ ಚಿಕಿತ್ಸೆ ಉಪಚಾರದಿಂದ ಹೃದ್ರೋಹಿಧಿಗಳ ಕೊಲೆಸ್ಟ್ರಾಲ್ ಕೂಡ ಕರಗಿಸುತ್ತದೆ ಎಂದು ಮೈಸೂರಿನ central food technology research institute ನಲ್ಲಿ ಕಂಡು ಹಿಡಿಯಲಾಗಿದೆ.

ಲೇಖಕರು- ಅಭೀಷೇಕ ಬನವಣೆ

Comments

Popular posts from this blog

Sneha yoni / Snehaashaya, Panchakarma

Dagdha Vrana (burns), Shalya tantra

Swedana karma