ಶೀತಲೀ ಪ್ರಾಣಾಯಾಮದ ಪ್ರಯೋಜನಗಳು ಹಾಗೂ ಮಾಡುವ ವಿಧಾನ


ಧ್ಯಾನಕ್ಕೆ ಉಪಯುಕ್ತವಾದ ಆಸನದಲ್ಲಿ ಕುಳಿತು ಕೈಯನ್ನು ಮೊಣಕಾಲಿನ ಮೇಲೆಡಿ.

ನಾಲಿಗೆಯನ್ನು ನಾಳದ ಕಡೆ ತಿರುಗಿಸಿ ಬಾಯನ್ನು ತೆರೆದಿಟ್ಟು ಬಾಯಿಂದ ಪೂರಕವಾಗುವಂತೆ ಮಾಡಿ.

ನಾಲಿಗೆಯಿಂದ ನಿಧಾನವಾಗಿ ಉಸಿರು ತೆಗೆದುಕೊಂಡು ಶ್ವಾಸಕೋಶಕ್ಕೆ ಪೂರ್ಣ ಭರ್ತಿ ಮಾಡಿ.

ಕೆಲವು ಕ್ಷಣ ತಡೆದು ಬಾಯಿಯನ್ನು ಮುಚ್ಚಿ ಎರಡು ನಾಸಿಕ ದಿಂದ ವಿರೇಚನಗೊಳಿಸಿ.

ನಂತರ ನಾಲಿಗೆಯನ್ನು ತಿರುಗಿಸಿ ಬಾಯಿಂದ ಪೂರಕ ಹಾಗೂ ಮೂಗಿನಿಂದ ವಿರೇಚನಗೊಳಿಸಿ.

ಈ ರೀತಿ ಐದರಿಂದ ಹತ್ತು ಬಾರಿ ಅವಶ್ಯಕತೆಗನುಗುಣವಾಗಿ ಮಾಡಬಹುದು.

ಶೀತಕಾಲದಲ್ಲಿ ಇದರ ಅಭ್ಯಾಸ ಕಡಿಮೆಗೊಳಿಸಿ.

ವಿಶೇಷತೆ-

ಕುಂಭ ಕದ ಜೊತೆಗೆ ಜಾಲಂಧರಬಂಧ ವನ್ನು ಸಹ ಮಾಡಬಹುದು ಹಾಗೂ ಟಾನ್ಸಿಲ ರೋಗಿಗಳು ಶೀತಲ ಹಾಗೂ ಶೀತಕಾರಿ ಪ್ರಾಣಾಯಾಮ ಮಾಡಬಾರದು.

ಲಾಭಗಳು-

ನಾಲಿಗೆ ಬಾಯಿ ಹಾಗೂ ಗಂಟಲಿನ ರೋಗಗಳಿಗೆ ಲಾಭದಾಯಕವಾಗಿದೆ. ಗುಲ್ , ಜ್ವರ, ಅಜೀರ್ಣತೆ ಮುಂತಾದವುಗಳಿಗೆ ಅನುಕೂಲವಾಗಿದೆ.


ಇದರ ಸಿದ್ಧಿಯಿಂದ ಹಸಿವು ದಣಿವು ಮಾಯವಾಗುವುದು. ಈ ರೀತಿ ಯೋಗ ಗ್ರಂಥದಲ್ಲಿ ಹೇಳಲಾಗಿದೆ.


ಅಧಿಕ ರಕ್ತದ ಒತ್ತಡವನ್ನು ಕಡಿಮೆ ಮಾಡುವುದು ಪಿತ್ತ ರೋಗಗಳಿಗೆ ಲಾಭದಾಯಕವಾಗುವುದು ಹಾಗೂ ರಕ್ತವನ್ನು ಶುದ್ಧೀಕರಿಸುವುದು.


Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra