ಕುದುರೆ ಹಾಲು ಹೃದಯ ರೋಗಕ್ಕೆ ರಾಮಬಾಣ

ಕುದುರೆ ಹಾಲು ಕುಡಿದರೆ ಹೃದಯ ರೋಗ ಬರುವ ಸಂಭವ ತುಂಬಾ ಕಡಿಮೆ ಎಂದು ಮಂಗೋಲಿಯಾದ ದೇಶಿಯ ವೈದ್ಯರು ಹೇಳುತ್ತಾರೆ.


ಮಂಗೋಲಿಯಾದ ದೇಸೀ ವೈದ್ಯ ಪದ್ಧತಿ ಸಂಸ್ಥೆಯ ವೈದ್ಯರು ತಿಳಿಸಿದಂತೆ ಕುದುರೆ ಹಾಗೂ ರಕ್ತದ ಒತ್ತಡವನ್ನು ಹಾಗೂ ರಕ್ತದಲ್ಲಿನ ಕೊಬ್ಬಿನ ಅಂಶವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಶರೀರದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವುದಲ್ಲದೆ ಹೃದಯದ ಕೆಲಸದ ಸಾಮರ್ಥ್ಯ ಹೆಚ್ಚಿಸುತ್ತದೆ ಎಂದು ಕೂಡ ಮಂಗೋಲಿಯದ ವೈದ್ಯರು ಕೊಂಡುಕೊಂಡಿದ್ದಾರೆ.


ಹೃದಯ ವ್ಯಾಧಿ ಇರುವ 500 ರೋಗಿಗಳಿಗೆ ಮಂಗೋಲಿಯಾದ ಸಂಸ್ಥೆಯಲ್ಲಿ ಕುದುರೆ ಹಾಲಿನ ಚಿಕಿತ್ಸೆ ನೀಡಲಾಗಿತ್ತು. ಇದರಿಂದ ರಕ್ತದ ಒತ್ತಡ ಶೇಕಡ 75.5ರಷ್ಟು ಹಾಗೂ ಕೊಬ್ಬಿನ ಅಂಶ ಶೇಕಡ 90 ಕಡಿಮೆ ಆಯಿತು.


ಕುದುರೆ ಹಾಲು ಮಂಗೋಲಿಯಾದಲ್ಲಿ ಹಿಂದಿನಿಂದಲೂ ಆರೋಗ್ಯವರ್ಧಕ ಪಾನೀಯ ಆಗಿದ್ದು ಮನೆಗೆ ಬಂದ ಅತಿಥಿಗಳಿಗೆ ವಿಶೇಷವಾಗಿ ಉಣಬಡಿಸುವ ಸಂಪ್ರದಾಯವಾಗಿದೆ.


Comments

Popular posts from this blog

ಯೋಗ ಒಂದು ಜೀವನ ದರ್ಶನ

Kaya, Kayachikitsa

Swedana karma