ಯೋಗಾಸನ ಅಭ್ಯಾಸಿಗಳು ಗಮನಿಸಬೇಕಾದ ಅಂಶಗಳು
ಸಾಧಕನು ಮೂಗಿನ ಮೂಲಕವೇ ಉಸಿರಾಡಬೇಕು.
ಪ್ರಥಮ ಸಂಧ್ಯಾಕಾಲದಲ್ಲಿ ಮಾತ್ರ ಯೋಗಾಸನವನ್ನು ಬರಿ ಹೊಟ್ಟೆಯಲ್ಲಿರುವಾಗ ಅಭ್ಯಾಸ ಮಾಡುವುದು ಉತ್ತಮ.
ಬೇಕೆಂದಿದ್ದರೆ ಒಂದು ಲೋಟ ಹಾಲು ಅಥವಾ ಚಹಾ ಅಥವಾ ಕಾಫಿ ಅನ್ನು ಸೇವಿಸಿ ಇಪ್ಪತ್ತು ನಿಮಿಷಗಳ ನಂತರ ಅಭ್ಯಾಸವನ್ನು ಮಾಡಬಹುದು.
ಊಟವಾದ ಬಳಿಕ 4 ಗಂಟೆ ಬಿಟ್ಟು ಅಭ್ಯಾಸ ಮಾಡಬೇಕು ಅಭ್ಯಾಸವಾದ ನಂತರ ಅರ್ಧದಿಂದ ಒಂದು ತಾಸು ಬಿಟ್ಟು ಆಹಾರವನ್ನು ಸೇವಿಸಬಹುದು.
ಆಸನವನ್ನು ಪದೇಪದೇ ದಿನೇದಿನೇ ವರ್ಷವರ್ಷವೂ ಮಾಡುತ್ತಿರಬೇಕು ಇದು ಶ್ರವಣ ಅಥವಾ ಜಪ ಕರ್ಮಮಾರ್ಗ.
ಯೋಗಾಸನಗಳನ್ನು ತಪ್ಪಿಸದೆ ಎಡೆಬಿಡದೆ ನಿಷ್ಠರಾಗಿ ನಿರಂತರವಾಗಿ ಮತ್ತು ನಿಯಮಬದ್ಧವಾಗಿ ಮುಂದುವರಿಸಿ ಕೊಳ್ಳಬೇಕು ನಡುವಿನಲ್ಲಿ ತಪ್ಪಿಸಿದ್ದರೆ ಅವುಗಳ ಪ್ರಯೋಜನ ಗುಣಗಳು ಕಡಿಮೆಯಾಗುತ್ತವೆ.
ಕೆಲವು ಯೋಗಾಸನಗಳ ಅಭ್ಯಾಸದ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಬಹುದು ಆದರೆ ಎಡೆಬಿಡದೆ ಹಟದಿಂದ ಅಭ್ಯಾಸವನ್ನು ಮುಂದುವರಿಸಿದರೆ ಕ್ರಮೇಣ ಸುಲಭವಾಗುವುದು.
ಅಭ್ಯಾಸದಲ್ಲಿ ತೊಡಗುವ ಮುನ್ನ ಮೇಲೆ ಹಾಗೂ ಮೂತ್ರಕೋಶ ಗಳನ್ನು ಬರೆದು ಮಾಡಬೇಕು.
ಮಹಿಳೆಯರು ಯೋಗಾಸನಗಳನ್ನು ಆಚರಿಸಬಹುದು ಆದರೆ ತಮ್ಮ ಋತುಕಾಲದಲ್ಲಿ, 5 ತಿಂಗಳ ನಂತರದ ಗರ್ಭಿಣೀ ಅವಸ್ಥೆಯಲ್ಲಿಯು, ಪ್ರಸೂತಿಯಾದ ಎರಡರಿಂದ ಮೂರು ತಿಂಗಳ ಗಳವರೆಗೂ ಯೋಗಾಸನವನ್ನು ಆಚರಿಸಬಾರದು.
Comments
Post a Comment