ರುಚಿಯಾದ ಹಸಿ ಮೆಣಸಿನಕಾಯಿಯ ಕರಿ ಮಾಡುವ ವಿಧಾನ ತಿಳಿದುಕೊಳ್ಳಿ
ಬೇಕಾಗುವ ಸಾಮಾನುಗಳು-
100ಗ್ರಾಂ ಹಸಿಮೆಣಸಿನಕಾಯಿ
50ಗ್ರಾಂ ಎಣ್ಣೆ
50 ಗ್ರಾಂ ಹುಣಸೆಹಣ್ಣು
50 ಗ್ರಾಂ ಬೆಲ್ಲ
1/6ಟೀ ಚಮಚ ಹಿಂಗು
1/2 ಚಮಚ ಸಾಸಿವೆ ಕಾಳು
1/2 ಚಮಚ ಉದ್ದು
2 ಚಮಚ ಮೆಣಸಿನ ಪುಡಿ
1ಚಿವುಟು ಕೇಸರಿ
ರುಚಿಗೆ ಬೇಕಾಗುವಷ್ಟು ಉಪ್ಪು
ವಿಧಾನಗಳು-
ಬಾಣಲೆಯಲ್ಲಿ ಎಣ್ಣೆ ಕಾಯಿಸಿ
ಅದಕ್ಕೆ ಹಿಂಗು ಸಾಸಿವೆ ಕಾಳು ಮತ್ತು ಉದ್ದು ಸೇರಿಸಿ ಕರಿಯಿರಿ.
ಅವುಗಳು ಸಿಡಿಯುವಾಗ ಹಸಿಮೆಣಸಿನಕಾಯಿ ಸೇರಿಸಿ
ಅವುಗಳು ಕಂದುಬಣ್ಣಕ್ಕೆ ಬರುವ ತನಕ ಕರಿಯಿರಿ
ಈಗ ಹುಣಸೆಹಣ್ಣು ಕೇಸರಿ ಒಣ ಮೆಣಸಿನಪುಡಿ ಮತ್ತು ಬೆಲ್ಲ ಸೇರಿಸಿ ದಪ್ಪವಾಗುವ ತನಕ ಬೇಯಿಸಿ ಕೆಳಗಿಳಿಸಿ
ಬಿಸಿಯಾಗಿರುವಾಗಲೇ ಬಡಸಿ
Comments
Post a Comment