ಮೈದಾ ಹಿಟ್ಟಿನ ಚಕ್ಕುಲಿ ಮಾಡುವ ವಿಧಾನವನ್ನು ತಿಳಿದುಕೊಳ್ಳಿ


ಬೇಕಾಗುವ ಸಾಮಾನುಗಳು-

450 ಗ್ರಾಂ ಮೈದಾ ಹಿಟ್ಟು

1 ಚಮಚ ಬೆಣ್ಣೆ

300 ಗ್ರಾಂ ಉದ್ದಿನಬೇಳೆ

ಒಂದು ಚಮಚ ಎಳ್ಳು

ಎರಡು ಚಮಚ ರುಚಿಗೆ ಬೇಕಾದಷ್ಟು ಉಪ್ಪು

ಕರಿಯಲು ಎಣ್ಣೆ

ವಿಧಾನ-

ಉದ್ದಿನ ಬೇಳೆಯನ್ನು ಎಣ್ಣೆ ಮುಟ್ಟಿಸದೆ ಒಣ ಹುರಿದು ಬಿಸಿ ಸೋಸಿ ಇಟ್ಟುಕೊಳ್ಳಿ.

ಮೈದಾಹಿಟ್ಟನ್ನು ಸೋಸಿ ಬಟ್ಟೆಯಲ್ಲಿ ಹಾಕಿ ಸಡಿಲಾಗಿ ಕಟ್ಟಿ.

ಇದನ್ನು ಹಬೆ ಪಾತ್ರೆಯ ಒಳಗಡೆ ಇಟ್ಟು 15 ರಿಂದ 20 ನಿಮಿಷ ಕಾಲ ಹಬೆಯಲ್ಲಿ ಬೇಯಿಸಿ ಹೊರತೆಗೆಯಿರಿ.

ಅದು ತಣ್ಣಗಾದ ನಂತರ ಬಟ್ಟೆಯ ಗಂಟು ಬಿಚ್ಚಿ ಹಿಟ್ಟನ್ನು ಪುಡಿ ಮಾಡಿ ಸೋಸಿ.

ಎಳ್ಳನ್ನು ತೊಳೆದು ಹಾಕಿ ಅದಕ್ಕೆ ಉದ್ದಿನ ಹಿಟ್ಟು ಬೆಣ್ಣೆ ಉಪ್ಪು ಸೇರಿಸಿ ಸ್ವಲ್ಪ ನೀರು ಚಿಮುಕಿಸುತ್ತಾ ಮರ್ದಿಸಿ ನಾದಿ ಚಕ್ಕುಲಿ ಹಿಟ್ಟು ಮಾಡಿ.

ಇದನ್ನು ಸ್ವಲ್ಪ ಸ್ವಲ್ಪವಾಗಿ ಚಕ್ಕುಲಿ ಅಚ್ಚಿಗೆ ಹಾಕಿ ಒತ್ತಿ ಚಕ್ಕುಲಿ ತಯಾರಿಸಿ.

ಅವುಗಳನ್ನು ಕಾದ ಎಣ್ಣೆಯಲ್ಲಿ ಮುಳಗಿಸಿ ಕರೆಯಿರಿ.

ಈಗ ಮೈದಾ ಹಿಟ್ಟಿನ ಚಕ್ಕುಲಿ ಸವಿಯಲು ಸಿದ್ದ.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra