ತರಕಾರಿ ಸಾಂಬಾರು ಮಾಡುವ ವಿಧಾನವನ್ನು ತಿಳಿದುಕೊಳ್ಳಿ
ಬೇಕಾಗುವ ಸಾಮಾನುಗಳು-
ತಮಗೆ ಬೇಕಾದ ತರಕಾರಿ ಅಂದರೆ ಬಾಳೆಕಾಯಿ ಹಾಗಲಕಾಯಿ ಬೆಂಡೆಕಾಯಿ ಪಡವಲಕಾಯಿ ಬದನೆಕಾಯಿ ನುಗ್ಗೆಕಾಯಿ ಈರುಳ್ಳಿ ಆಲೂಗಡ್ಡೆ ಇತ್ಯಾದಿ.
125 ಗ್ರಾಂ ತೊಗರಿಬೇಳೆ
ಮೂರು ಚಮಚ ತೆಂಗಿನ ತುರಿ
1 ಟೀ ಚಮಚ ಮೆಂತೆ
ಒಂದೂವರೆ ಚಮಚ ಕಡಲೆಬೆಳೆ
3/4 ಅಂಗುಲ ಗಾತ್ರದಷ್ಟು ಹುಣಸೆಹಣ್ಣು
ಐದರಿಂದ ಆರು ಒಣಮೆಣಸಿನಕಾಯಿ
2 ಚಮಚ ಕೊತ್ತಂಬರಿ ಬೀಜ
7-8 ಕರಿಮೆಣಸಿನ ಕಾಳುಗಳು
1 ಚಮಚ ಸಾಸಿವೆ
ಒಂದು ಸಣ್ಣ ಗೊಂಚಲು ಕೊತ್ತಂಬರಿ ಸೊಪ್ಪು
2 ಗರಿ ಕರಿಬೇವಿನ ಎಲೆ
ಒಂದು ಚಿಟಿಕೆ ಹಿಂಗು
1 ಟೀ ಚಮಚ ಜೀರಿಗೆ
3/4ಅಂಗುಲದಷ್ಟು ಅರಸಿಣ ತುಂಡು
ಎರಡರಿಂದ ಮೂರು ಚಮಚ ಎಣ್ಣೆ
ರುಚಿಗೆ ಬೇಕಾದಷ್ಟು ಉಪ್ಪು.
ವಿಧಾನ-
ತೊಗರಿಬೇಳೆಯನ್ನು ತೊಳೆಯಿರಿ.
ಪಾತ್ರೆಯೊಂದರಲ್ಲಿ ಸುಮಾರು 3 ಕಪ್ ನೀರು ಕುದಿಸಿ ಅದಕ್ಕೆ ತೊಗರಿ ಬೇಳೆ ಹಾಕಿ ಬೇಯಿಸಿ.
ತರಕಾರಿಗಳನ್ನು ತುಂಡು ಮಾಡಿ.
ಬೇರೊಂದು ಒಲೆಯ ಮೇಲೆ ಬಾಣಲೆ ಇಟ್ಟು ಅದರಲ್ಲಿ ಸ್ವಲ್ಪ ಎಣ್ಣೆ ಕಾಯಿಸಿ.
ಈ ಎಣ್ಣೆಯಲ್ಲಿ ಕೊತ್ತಂಬರಿ ಮೆಂತ್ಯೆ ಸಾಸಿವೆ ಅರಿಶಿನ ಕರಿಮೆಣಸಿನ ಕಾಳು ಜೀರಿಗೆ ಕಡಲೆಬೇಳೆ ಒಣ ಮೆಣಸಿನಕಾಯಿ ಹಿಂಗು ಕರಿಬೇವಿನ ಎಲೆ ಮತ್ತು ತೆಂಗಿನ ತುರಿ ಇವುಗಳನ್ನೆಲ್ಲ ಅನುಕ್ರಮವಾಗಿ ಹಾಕಿ ಕಂದು ಬಣ್ಣಕ್ಕೆ ಬರುವ ತನಕ ಹುರಿಯಿರಿ.
ಈ ಹುರಿದ ಸಾಮಗ್ರಿಗಳಿಗೆ ಹುಣಸೆಹಣ್ಣು ಸೇರಿಸಿ ರುಬ್ಬಿ .
ತೊಗರಿ ಬೇಳೆ ಬೆಂದ ನಂತರ ಅದಕ್ಕೆ ತರಕಾರಿ ಹಾಗೂ ಸ್ವಲ್ಪ ಕೊತ್ತಂಬರಿ ಸೊಪ್ಪು ಹಾಕಿ ನಿಧಾನವಾಗಿ ಬೇಯಿಸಿ.
ಈಗ ಅದಕ್ಕೆ ರುಬ್ಬಿಟ್ಟ ಮಸಾಲೆ ಮತ್ತು ಉಪ್ಪು ಹಾಕಿ ಬೇಕಾದಷ್ಟು ನೀರು ಸೇರಿಸಿ ಚೆನ್ನಾಗಿ ಬೇಯಿಸಿ ಕುದಿ ಬಂದ ನಂತರ ಕೆಳಗಿಳಿಸಿ ಈಗ ಬಾಕಿ ಉಳಿದಿರುವ ಕೊತ್ತಂಬರಿ ಸೊಪ್ಪನ್ನು ಕತ್ತರಿಸಿ ಹಾಕಿ ಮುಚ್ಚಳವನ್ನು ಇಟ್ಟುಕೊಳ್ಳಿ.
ಈಗ ತರಕಾರಿ ಸಾಂಬಾರು ಸವಿಯಲು ಸಿದ್ದ
Comments
Post a Comment