ಬಾದಾಮ್ ಖೀರ್ ಮಾಡುವ ವಿಧಾನವನ್ನು ತಿಳಿದುಕೊಳ್ಳಿ
ಬೇಕಾಗುವ ಸಾಮಗ್ರಿಗಳು-
2ಲೀಟರ್ ಹಾಲು
1/2 ಕಿಲೋ ಗ್ರಾಂ ಬಾದಾಮ್
6 ಏಲಕ್ಕಿ ಕೋಡು ಹುಡಿ ಮಾಡಿ
ಸ್ವಲ್ಪ ಅರಿಶಿನ ಹುಡಿ
ರುಚಿಗೆ ಬೇಕಾಗುವಷ್ಟು ಸಕ್ಕರೆ
ವಿಧಾನ-
ಬಾದಾಮನ್ನು ಬೇಯಿಸಿ ಸಿಪ್ಪೆ ಸುಲಿದು ದೊರಗಾಗಿ ಅರೆಯಿರಿ.
ಅದಕ್ಕೆ ಹಾಲು ಮತ್ತು ಸ್ವಲ್ಪ ಅರಿಶಿನ ಹುಡಿ ಸೇರಿಸಿ ಕುಲುಕಿಸಿ 30-45 ನಿಮಿಷಗಳ ಕಾಲ ಬೇಯಿಸಿ.
ಅದಕ್ಕೆ ಸಕ್ಕರೆ ಸೇರಿಸಿ ಕರಗಿಸಿ ಕೆಳಗಿಳಿಸಿ.
ಅದರ ಮೇಲೆ ಏಲಕ್ಕಿ ಹುಡಿಯನ್ನು ಸಿಂಪಡಿಸಿ.
ಈಗ ಬಾದಾಮ್ ಖೀರ್ ಸವಿಯಲು ಸಿದ್ಧ
Comments
Post a Comment