ಪಶ್ಚಿಮೋತ್ತಾಸನ ವನ್ನು ಮಾಡುವ ವಿಧಾನಗಳು ಹಾಗೂ ಪ್ರಯೋಜನ


ಅಭ್ಯಾಸರಕ್ರಮ-

ಅಂಗಾತ ಮಲಗಿ.

ಆ ಬಳಿಕ ತಲೆ ಮತ್ತು ಎದೆಯನ್ನು ಮೇಲಕ್ಕೆತ್ತಿ ನೇರವಾಗಿ ಕುಳಿತುಕೊಳ್ಳಿ.

ಉಸಿರುಬಿಟ್ಟು ತಲೆ ಮತ್ತು ಎದೆಯನ್ನು ಮುಂದಕ್ಕೆ ಬಾಗಿಸಿ ಚಿತ್ರದಲ್ಲಿ ಕಾಣಿಸಿದಂತೆ ಎರಡು ಕೈ ತೋರುಬೆರಳುಗಳಿಂದ ಕಾಲಿನ ಹೆಬ್ಬೆರಳನ್ನು ಹಿಡಿಯಿರಿ.

ಹಣೆಯನ್ನು ಮೊಣಕಾಲುಗಳಿಗೆ ತಾಗಿಸಿ.

ಮೊಣಕಾಲು ಬಾಗಿಸಿದಂತೆ ಇರಬೇಕು.

5 ಸೆಕೆಂಡುಗಳ ನಂತರ ತಲೆಯನ್ನು ಮೇಲಕ್ಕೆತ್ತಿ ಉಸಿರನ್ನು ಎಳೆದುಕೊಳ್ಳಿ.

ಕ್ರಮೇಣ 5 ಸೆಕೆಂಡುಗಳಿಂದ ಒಂದು ನಿಮಿಷದ ವರೆಗೆ ಈ ಆಸನದ ನಿಲುವನ್ನು ಮುಂದುವರಿಸಬಹುದು.

ಪ್ರಯೋಜನ-

ಈ ಆಸನದಿಂದ ಜಠರದ ಎಲ್ಲ ಸ್ನಾಯುಗಳಿಗೂ ಬಲ ಒದಗಿ ಬರುತ್ತದೆ.

ಹಾಗೆಯೇ ಜಠರದ ಕೆಳಭಾಗದಲ್ಲಿರಬಹುದಾದ ಎಲ್ಲ ತರದ ವಾಯುವು ಹೊರದೂಡಲ್ಪಡುತ್ತದೆ.

ಬೆನ್ನೆಲುಬಿನ ಸ್ನಾಯು ಹಾಗೂ ಅಸ್ತಿರುಜ್ಜುವಿನ ಶಕ್ತಿ ವೃದ್ಧಿಯಾಗುವುದು.

ರಕ್ತಸಂಚಾರ ಹೆಚ್ಚು ಬೆನ್ನುಹುರಿಯ ಸಾಮರ್ಥ್ಯ ಚುರುಕಾಗುತ್ತದೆ.

ಈ ಆಸನವನ್ನು ಎಡಬಿಡದೆ ಆಚರಿಸುವುದರಿಂದ ದಿನಾಲು ಐದಾರು ಕಿಲೋಮೀಟರುಗಳಷ್ಟು ದೂರ ಓಡಿದಷ್ಟು ವ್ಯಾಯಾಮ ವಾಗುವುದು.

ಅಕಾಲ ಮೃತ್ಯುವಿಗೆ ಕಾರಣವಾದ ಬೊಜ್ಜು ಕರಗುವುದು.

ಸೊಂಟ ಮತ್ತು ಹೊಟ್ಟೆಯನ್ನು ಆವರಿಸಿದಂತಿರುವ ಮಾಂಸ ಕರಗಿ ದೇಹ ತೆಳುವಾಗುವುದು.

Comments

Popular posts from this blog

ಯೋಗ ಒಂದು ಜೀವನ ದರ್ಶನ

Swedana karma

Uthsangini/ Uthsangini, Varthma Rogas, Shalakya Tantra