ಮಧುಮೇಹ ಅಥವಾ ಸಿಹಿಮೂತ್ರ ರೋಗದ ಲಕ್ಷಣಗಳು- ಸಿಹಿ ಮೂತ್ರ ರೋಗಿಗಳ ರಕ್ತದಲ್ಲಿನ ಮತ್ತು ಮೂತ್ರದಲ್ಲಿ ಸಕ್ಕರೆ ಪ್ರಮಾಣ ಹೆಚ್ಚುತ್ತದೆ. ರೋಗಿಗೆ ಪದೇ-ಪದೇ ಮೂತ್ರ ವಿಸರ್ಜನೆಯಾಗುತ್ತದೆ ಮತ್ತು ಮೂತ್ರದ ಪ್ರಮಾಣವೂ ಹೆಚ್ಚುವುದು. ಮೂತ್ರದ ಬಣ್ಣದಲ್ಲಿ ಸ್ವಲ್ಪ ವ್ಯತ್ಯಾಸ ಕಂಡು ಬರುವುದು. ರೋಗಿಗೆ ಹಸಿವು ಬಾಯಾರಿಕೆ ಹೆಚ್ಚುವುದು. ಎಷ್ಟು ಆಹಾರ ಸೇವಿಸಿದರೂ ಬಲಹೀನತೆ, ಆಯಾಸ, ತೂಕಡಿಕೆ, ನವೆ ಮತ್ತು ಕುರುಗಳು ಉಂಟಾಗುವವು. ಈ ವ್ಯಾಧಿಗೆ ಸಂಪೂರ್ಣ ಪರಿಹಾರ ಇಲ್ಲವಾದರೂ ಯೋಗ್ಯವಾದ ಚಿಕಿತ್ಸೆಗಳ ಮೂಲಕ ಅದನ್ನು ಸಮಗ್ರವಾಗಿ ಹತೋಟಿಯಲ್ಲಿ ಇಡಬಹುದು. ಮಧುಮೇಹ ರೋಗಿಗಳು ಸಿಹಿ ಪದಾರ್ಥಗಳನ್ನು ಸೇವಿಸದಿರುವುದು ಕ್ಷೇಮ ಅನ್ನ, ಶರ್ಕರ, ಪಿಷ್ಟಗಳನ್ನು ಆದಷ್ಟು ಕಡಿಮೆ ಮಾಡಬೇಕು. ಬ್ರೆಡ್, ಆಲೂಗಡ್ಡೆ, ಕೇಕ್, ಬಿಸ್ಕತ್ತು, ಬಾಳೆಹಣ್ಣು , ಕಾಫಿ, ಚಹಾ, ಹೊಗೆಸೊಪ್ಪು, ಮಧ್ಯ ಇವುಗಳನ್ನು ಸಂಪೂರ್ಣವಾಗಿ ತ್ಯಜಿಸಬೇಕು. ನಿತ್ಯ ಆಹಾರದಲ್ಲಿ ಉಪ್ಪನ್ನು ಅತಿಯಾಗಿ ಸೇವಿಸುವುದರಿಂದ ಸಿಹಿಮೂತ್ರ ರೋಗ ಮತ್ತು ಅಧಿಕ ರಕ್ತದ ಒತ್ತಡ ಉಂಟಾಗುವ ಸಂಭವವಿರುತ್ತದೆ. ಆದುದರಿಂದ ಮಾನವನು ಉಪ್ಪನ್ನು ಆದಷ್ಟು ಕಡಿಮೆ ಯಾಗಿ ಸೇವಿಸುವುದು ಉತ್ತಮ. ಮಧುಮೇಹ ಸಿಹಿಮೂತ್ರ ರೋಗವನ್ನು ಸಂಪೂರ್ಣ ಹತೋಟಿಯಲ್ಲಿಡುವ ಕೆಲವು ಚಿಕಿತ್ಸೆಗಳನ್ನು ಈ ಕೆಳಗೆ ವಿವರಿಸಲಾಗಿದೆ:- ಕೆಲವು ಬೇವಿನ ಎಲೆಗಳನ್ನು ಎರಡರಿಂದ ಮೂರು ದಿನ ನೆರಳಲ್ಲಿ ಒಣಗಿಸಿ ಪುಡಿ ಮಾಡಿ ಅದಕ್ಕೆ ಸ್ವಲ್ಪ ಓಮದ (ಅಜವ...