Posts

ಲವಂಗದ ಉಪಯೋಗವನ್ನು ತಿಳಿದುಕೊಳ್ಳಿ

Image
ಇದು ಕಫ ವಾತ ಕೆಮ್ಮು ಅಗ್ನಿಮಾಂದ್ಯ ಬಿಕ್ಕು ಜ್ವರ ನೆಗಡಿ ಇವುಗಳನ್ನು ನಾಶ ಮಾಡುತ್ತದೆ. ಹಲ್ಲುಗಳಲ್ಲಿ ನೋವಿದ್ದರೆ ಲವಂಗದ ಎಣ್ಣೆಯನ್ನು ಹತ್ತಿಯಲ್ಲಿ ಅದ್ದಿ ಹಲ್ಲಿನ ಸಂದಿಯಲ್ಲಿ ಇಡಬೇಕು.

ಬೂಂದಿ ಲಾಡು ಮಾಡುವ ವಿಧಾನವನ್ನು ತಿಳಿದುಕೊಳ್ಳಿ

Image
ಬೇಕಾಗುವ ಸಾಮಾನುಗಳು- 11ಗ್ರಾಂ ಕಡಲೆಹಿಟ್ಟು ಒಂದು ಚಿಟಿಕೆ ಸೋಡಾ ಬೈಕಾರ್ಬೋನೇಟ್ 115 ಗ್ರಾಂ ಸಕ್ಕರೆ 60ಮೀ ಲೀ ನೀರು 30ಗ್ರಾಂ ತುಪ್ಪ 20ಗ್ರಾಂ ತುರಿದ ಪಿಸ್ತಾ ಕೇಸರ ಮತ್ತು ಕಾರ್ಡಮಮ್ ಫ್ಲೇವರ್ ಆರೆಂಜ್ ಕಲರ್ ವಿಧಾನ- ಮೊದಲು ಸಕ್ಕರೆಯಲ್ಲಿಸಕ್ಕರೆಯಲ್ಲಿ 6 ಚಮಚ ನೀರು ಬೆರೆಸಿ ಕಂಬಿ ಪಾಕ ತರಿಸಿಕೊಳ್ಳಿ . ನಂತರ ಕಡಲೆ ಹಿಟ್ಟಿನಲ್ಲಿ ನೀರು ಹಾಗೂ ಸೋಡಾ ಬೈಕಾರ್ಬೋನೇಟ್ ಬೆರೆಸಿ ದಪ್ಪವಾದ ಕಣವನ್ನು ತಯಾರಿಸಿ. ನಾಲ್ಕು ಹನಿ ಆರೆಂಜ್ ಕಲರ್ ಹಾಕಿ ಬೆರೆಸಿ. ಆಳವಾದ ಬಾಣಲೆಯಲ್ಲಿ ತುಪ್ಪವನ್ನು ಹಾಕಿ ಕಾಯಿಸಿ. ಹಾಗೂ ಅದರಲ್ಲಿ ಬೂಂದಿಯ ಝಾರದ ತೂತುಗಳುಳ್ಳ ಸಟ್ಟುಗ ಮೇಲೆ ಕಣಕವನ್ನು ಹೊಯ್ದು ಬಾಣಲೆಯಲ್ಲಿ ಬೂಂದಿಯನ್ನು 1-2 ನಿಮಿಷಗಳವರಗೆ ಕರೆಯಬೇಕು. ಈಗ ಕರಿದ ಬೂಂದಿಯನ್ನು ಈ ಪಾಕದಲ್ಲಿ ಹಾಕಿರಿ. ಮತ್ತು Keesara cardamom flavour ಮತ್ತು ತುರಿದ ಪಿಸ್ತಾವನ್ನು ಬೆರೆಸಿ. ಇದು ಇನ್ನೂ ಬಿಸಿಯಾಗಿರುವಾಗಲೇ ಉಂಡೆಕಟ್ಟಿರಿ. ಈಗ ಬೂಂದಿ ಲಾಡು ತಯಾರು

ಹೆಸರುಬೇಳೆ ಕೋಡುಬಳೆ ಮಾಡುವ ವಿಧಾನ ತಿಳಿದುಕೊಳ್ಳಿ

Image
ಬೇಕಾಗುವ ಸಾಮಗ್ರಿಗಳು- ಅರ್ಧ ಕಿಲೋ ಗ್ರಾಂ ಅಕ್ಕಿ ಹಿಟ್ಟು ಎರಡು ನೂರು ಗ್ರಾಂ ಹೆಸರುಬೇಳೆ 8 ಮೆಣಸಿನಕಾಯಿ ಉಪ್ಪು ಮಾಡುವ ವಿಧಾನ- 1ಲೀಟರ ನೀರು ಕುದಿಸಿ ಅದಕ್ಕೆ ಹೆಸರು ಬೇಳೆ ಹಾಕಿ. ಅರ್ಧ ಬೆಂದ ನಂತರ ಅಕ್ಕ...

ರುಚಿಯಾದ ಹಸಿ ಮೆಣಸಿನಕಾಯಿಯ ಕರಿ ಮಾಡುವ ವಿಧಾನ ತಿಳಿದುಕೊಳ್ಳಿ

Image
ಬೇಕಾಗುವ ಸಾಮಾನುಗಳು - 100ಗ್ರಾಂ ಹಸಿಮೆಣಸಿನಕಾಯಿ  50ಗ್ರಾಂ ಎಣ್ಣೆ 50 ಗ್ರಾಂ ಹುಣಸೆಹಣ್ಣು 50 ಗ್ರಾಂ ಬೆಲ್ಲ 1/6ಟೀ ಚಮಚ ಹಿಂಗು 1/2 ಚಮಚ ಸಾಸಿವೆ ಕಾಳು 1/2 ಚಮಚ ಉದ್ದು 2 ಚಮಚ ಮೆಣಸಿನ ಪುಡಿ 1ಚಿವುಟು ಕೇಸರಿ ರುಚಿಗೆ ಬೇಕ...

ಬಾದಾಮ್ ಖೀರ್ ಮಾಡುವ ವಿಧಾನವನ್ನು ತಿಳಿದುಕೊಳ್ಳಿ

Image
ಬೇಕಾಗುವ ಸಾಮಗ್ರಿಗಳು- 2ಲೀಟರ್ ಹಾಲು 1/2 ಕಿಲೋ ಗ್ರಾಂ ಬಾದಾಮ್ 6 ಏಲಕ್ಕಿ ಕೋಡು ಹುಡಿ ಮಾಡಿ ಸ್ವಲ್ಪ ಅರಿಶಿನ ಹುಡಿ ರುಚಿಗೆ ಬೇಕಾಗುವಷ್ಟು ಸಕ್ಕರೆ ವಿಧಾನ- ಬಾದಾಮನ್ನು ಬೇಯಿಸಿ ಸಿಪ್ಪೆ ಸುಲಿದು ದೊರಗಾಗಿ ...

ತರಕಾರಿ ಸಾಂಬಾರು ಮಾಡುವ ವಿಧಾನವನ್ನು ತಿಳಿದುಕೊಳ್ಳಿ

Image
ಬೇಕಾಗುವ ಸಾಮಾನುಗಳು- ತಮಗೆ ಬೇಕಾದ ತರಕಾರಿ ಅಂದರೆ ಬಾಳೆಕಾಯಿ ಹಾಗಲಕಾಯಿ ಬೆಂಡೆಕಾಯಿ ಪಡವಲಕಾಯಿ ಬದನೆಕಾಯಿ ನುಗ್ಗೆಕಾಯಿ ಈರುಳ್ಳಿ ಆಲೂಗಡ್ಡೆ ಇತ್ಯಾದಿ. 125 ಗ್ರಾಂ ತೊಗರಿಬೇಳೆ ಮೂರು ಚಮಚ ತೆಂಗಿನ ತು...

ಯೋಗಾಸನ ಅಭ್ಯಾಸಿಗಳು ಗಮನಿಸಬೇಕಾದ ಅಂಶಗಳು

Image
ಸಾಧಕನು ಮೂಗಿನ ಮೂಲಕವೇ ಉಸಿರಾಡಬೇಕು. ಪ್ರಥಮ ಸಂಧ್ಯಾಕಾಲದಲ್ಲಿ ಮಾತ್ರ ಯೋಗಾಸನವನ್ನು ಬರಿ ಹೊಟ್ಟೆಯಲ್ಲಿರುವಾಗ ಅಭ್ಯಾಸ ಮಾಡುವುದು ಉತ್ತಮ. ಬೇಕೆಂದಿದ್ದರೆ ಒಂದು ಲೋಟ ಹಾಲು ಅಥವಾ ಚಹಾ ಅಥವಾ ಕಾಫಿ ಅನ್ನು ಸೇವಿಸಿ ಇಪ್ಪತ್ತು ನಿಮಿಷಗಳ ನಂತರ ಅಭ್ಯಾಸವನ್ನು ಮಾಡಬಹುದು. ಊಟವಾದ ಬಳಿಕ 4 ಗಂಟೆ ಬಿಟ್ಟು ಅಭ್ಯಾಸ ಮಾಡಬೇಕು ಅಭ್ಯಾಸವಾದ ನಂತರ ಅರ್ಧದಿಂದ ಒಂದು ತಾಸು ಬಿಟ್ಟು ಆಹಾರವನ್ನು ಸೇವಿಸಬಹುದು. ಆಸನವನ್ನು ಪದೇಪದೇ ದಿನೇದಿನೇ ವರ್ಷವರ್ಷವೂ ಮಾಡುತ್ತಿರಬೇಕು ಇದು ಶ್ರವಣ ಅಥವಾ ಜಪ ಕರ್ಮಮಾರ್ಗ. ಯೋಗಾಸನಗಳನ್ನು ತಪ್ಪಿಸದೆ ಎಡೆಬಿಡದೆ ನಿಷ್ಠರಾಗಿ ನಿರಂತರವಾಗಿ ಮತ್ತು ನಿಯಮಬದ್ಧವಾಗಿ ಮುಂದುವರಿಸಿ ಕೊಳ್ಳಬೇಕು ನಡುವಿನಲ್ಲಿ ತಪ್ಪಿಸಿದ್ದರೆ ಅವುಗಳ ಪ್ರಯೋಜನ ಗುಣಗಳು ಕಡಿಮೆಯಾಗುತ್ತವೆ. ಕೆಲವು ಯೋಗಾಸನಗಳ ಅಭ್ಯಾಸದ ಪ್ರಾರಂಭದಲ್ಲಿ ಸ್ವಲ್ಪ ಕಷ್ಟವೆನಿಸಬಹುದು ಆದರೆ ಎಡೆಬಿಡದೆ ಹಟದಿಂದ ಅಭ್ಯಾಸವನ್ನು ಮುಂದುವರಿಸಿದರೆ ಕ್ರಮೇಣ ಸುಲಭವಾಗುವುದು. ಅಭ್ಯಾಸದಲ್ಲಿ ತೊಡಗುವ ಮುನ್ನ ಮೇಲೆ ಹಾಗೂ ಮೂತ್ರಕೋಶ ಗಳನ್ನು ಬರೆದು ಮಾಡಬೇಕು. ಮಹಿಳೆಯರು ಯೋಗಾಸನಗಳನ್ನು ಆಚರಿಸಬಹುದು ಆದರೆ ತಮ್ಮ ಋತುಕಾಲದಲ್ಲಿ, 5 ತಿಂಗಳ ನಂತರದ ಗರ್ಭಿಣೀ ಅವಸ್ಥೆಯಲ್ಲಿಯು, ಪ್ರಸೂತಿಯಾದ ಎರಡರಿಂದ ಮೂರು ತಿಂಗಳ ಗಳವರೆಗೂ ಯೋಗಾಸನವನ್ನು ಆಚರಿಸಬಾರದು.